ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು, ಮಿಜಾರಿನ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ವಿದಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಹೋಮಿಯೋಪಥಿ ವೈದ್ಯಕೀಯ ವಿಭಾಗದಲ್ಲಿ ಮೊದಲ 10 ರ್ಯಾಂಕ್‍ಗಳಲ್ಲಿ ಪ್ರಥಮ ರ್ಯಾಂಕ್ ಸಹಿತ ಆಳ್ವಾಸ್‍ಗೆ 3 ರ್ಯಾಂಕ್ ಲಭಿಸಿದೆ.
ವಿದ್ಯಾರ್ಥಿ ಸಾಯಿಕಿರಣ್ ರಾಗಮ್ (ಪ್ರಥಮ ರ್ಯಾಂಕ್), ಪ್ರಣಮ್ಯ ಜೈನ್ (4ನೇ ರ್ಯಾಂಕ್), ಶ್ವೇತಾ ಸುಬಾಸ್ ಮುರಗುಂಡಿ (8ನೇ ರ್ಯಾಂಕ್) ಪಡೆದಿದ್ದಾರೆ. ಅಂತಿಮ ವರ್ಷದ ಹೋಮಿಯೋಪಥಿ ವಿಭಾಗದಲ್ಲಿ ಪ್ರಣಮ್ಯ ಜೈನ್ (1ನೇ ರ್ಯಾಂಕ್), ಸಾಯಿಕಿರಣ್ ರಾಗಮ್ (ಎರಡನೇ ರ್ಯಾಂಕ್), ಶ್ವೇತಾ ಸುಬಾಸ್ ಮುರಗುಂಡಿ (4ನೇ ರ್ಯಾಂಕ್), ಶಿಫಾ ಸಿತಾರ (6ನೇ ರ್ಯಾಂಕ್), ಕ್ಯಾರಲ್ ಪರ್ಲ್ ಡಿಸೋಜ (9ನೇ ರ್ಯಾಂಕ್), ಅಶ್ವಿನಿ ಕೆ. (10ನೇ ರ್ಯಾಂಕ್) ಗಳಿಸಿದ್ದಾರೆ.
ವಿಷಯವಾರು ಹಾಗೂ ಕೋರ್ಸವಾರು ರ್ಯಾಂಕ್‍ಗಳಲ್ಲಿ ಒಟ್ಟು 99 ರ್ಯಾಂಕ್‍ಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ ರೋಶನ್ ಪಿಂಟೊ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.