ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರು ಅನಾರೋಗ್ಯದಿಂದ ಬಳಲುತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗುವಂತೆ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಲ್ಯಾಡಿ ಶಿವರಾಮ ಶೆಟ್ಟಿ, ಬೆಳ್ವೆ ಸತೀಶ್ ಕಿಣಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ವಂಡಬಳ್ಳಿ ಜಯರಾಮ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಉದಯ ಜಿ. ಪೂಜಾರಿ ಚಿತ್ತೂರು, ವಿಕಾಸ್ ಹೆಗ್ಡೆ ಬಸ್ರೂರು, ಸಂತೋಷ್ ಶೆಟ್ಟಿ ಬಲಾಡಿ, ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ಸದಾಶಿವ ಶೆಟ್ಟಿ ಶಂಕರ ನಾರಾಯಣ, ರಮೇಶ್ ಶೆಟ್ಟಿ ವಕ್ವಾಡಿ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ಹರ್ಜಿ ಕರುಣಾಕರ ಶೆಟ್ಟಿ, ಸುರೇಂದ್ರ ಶೆಟ್ಟಿ ಚಿತ್ತೂರು, ಸರ್ವೋತ್ತಮ ಶೆಟ್ಟಿ ಇಡೂರು, ಅರುಣ್ ಕುಮಾರ್ ಶೆಟ್ಟಿ ನಿಡುಟಿ, ಸಂತೋಷ ಶೆಟ್ಟಿ ಇಡೂರು, ಶಂಕರ ಶೆಟ್ಟಿ ಜವಳಿ, ಗೋವರ್ಧನ ಜೋಗಿ ಹರವರಿ, ಗುಂಡು ಪೂಜಾರಿ ಹರವರಿ, ತ್ಯಾಂಪಣ್ಣ ಶೆಟ್ಟಿ ವಂಡ್ಸೆ, ಸುಧಾಕರ ಶೆಟ್ಟಿ ವಂಡ್ಸೆ, ರುದ್ರಯ್ಯ ಆಚಾರ್ಯ ಆತ್ರಾಡಿ, ಮಂಜು ಕೊಠಾರಿ ಕೆರಾಡಿ, ಶ್ರವಣ್ ಶೆಟ್ಟಿ ಸಂಪಿಗೇಡಿ, ಗಣೇಶ್ ಶೆಟ್ಟಿ ವಂಡ್ಸೆ ಕಟ್ಟೆಮನೆ, ರಮೇಶ್ ಪೂಜಾರಿ ಬಳಿಹಿತ್ಲು ಉಪಸ್ಥಿತರಿದ್ದರು.
