ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಾಂತ್ರಿಕ ವಿಭಾಗದಿಂದ ಭಾರತ ರತ್ನ ಸರ್ ಎಂ.ವಿ. ವಿಶ್ವೇಶ್ವರಯ್ಯ ಇವರ 155 ನೇ ಜನ್ಮದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ ಹಾಗೂ ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ದೇವಳದ ಅಭಿಯಂತರರಾದ ಪ್ರದೀಪ್ ಡಿ.ಕೆ. ಮಾತನಾಡಿ ಸರ್ ಎಂ.ವಿ. ವಿಶ್ವೇಶ್ವರಯ್ಯನವರು ನಡೆದು ಬಂದ ದಾರಿ ಅವರ ದೂರ ದೃಷ್ಟಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಜೀವನದಲ್ಲಿ ಅಳವಡಿಸಿಕೊಂಡ ಪ್ರಾಮಾಣಿಕತೆ, ಸರಳತೆ ಶಿಸ್ತು, ದ್ಯೇಯ, ಉದ್ಧೇಶಹಾಗೂ ಸಮರ್ಪಣಾ ಮನೋಬಾವದ ಬಗ್ಗೆ ತಿಳಿಸುತ್ತಾ ಸರ್ ಎಂ.ವಿ. ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸುವುದು ಅಗತ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ದೇವಳದ ಕಿರಿಯ ಅಭಿಯಂತರರಾದ ಮುರಳಿಧರ ಹೆಗಡೆ ಇವರು ನಿರೂಪಿಸಿ ವಂದಿಸಿದರು. ಎ. ಗಂಗಾಧರ ಹೆಗ್ಡೆ ಇವರು ಪ್ರಾರ್ಥಿಸಿದರು.