ಇಂಜಿನಿಯರ್ಸ್ ಲಯನ್ಸ್ ಕ್ಲಬ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಲಯನ್ಸ್ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಪ್ರಾರಂಭವಾದ ಜಿಲ್ಲೆಯ 103ನೇ ಇಂಜಿನಿಯರ್ಸ್ ಲಯನ್ಸ್ ಕ್ಲಬ್ ಉದ್ಘಾಟನೆ ನಡೆಯಿತು

ಉದ್ಘಾಟಿಸಿ ಪ್ರಮಾಣ ವಚನ ಬೋದಿಸಿದ ಲಯನ್ಸ್ 317 ’ಸಿ’ ಯ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗಡೆ, ವೈಯಕ್ತಿಕವಾಗಿ ನೀಡುವ ಸೇವೆಗಿಂತಲೂ ಸಂಘಟನಾತ್ಮಕವಾಗಿ ನೀಡುವ ಸೇವೆಯು ತುಂಬಾ ಪರಿಣಾಮಾಕಾರಿಯಾದುದು. ವಿಶೇಷವಾಗಿ ಇಂಜಿನಿಯರ್‌ಗಳ ಒಗ್ಗೂಡೂವಿಕೆಯಿಂದ ಮೂಡಿಬರುವ ಕ್ಲಬ್ ಸಾಮಾಜಿಕ ಸೇವೆಯನ್ನು ಸಂಘಟನಾತ್ಮಕವಾಗಿ ಹಾಗೂ ಯೋಜನಾಬದ್ದವಾಗಿ ನೀಡಿ ಯಶಸ್ಸನ್ನು ಗಳಿಸುತ್ತದೆ  ಸೇವಾ ಮನೋಬಾವದಿಂದ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಶಕ್ತಿಯನ್ನು ಈ ಕ್ಲಬ್ ಹೊಂದಿದೆ ಹಾಗೂ ಈ ಕ್ಲಬ್‌ನಿಂದ ಮಹತ್ತರ ಕಾರ್ಯಗಳು ನಡೆಯಲಿ ಎಂದು ಹೇಳಿದರು.

ಲಯನ್ಸ್ ಕ್ಲಬ್ ಕುಂದಾಪುರ ಅಧ್ಯಕ್ಷರಾದ ಚಂದ್ರಶೇಖರ್ ಕಲ್ಪತರು ಅಧ್ಯಕ್ಷತೆ ವಹಿಸಿದ್ದರು, ಕ್ಲಬ್‌ನ ಪ್ರಾರಂಭಕ್ಕೆ ಕಾರಣೀಕರ್ತರಾದ ಇಂಜಿನಿರ್ ರಮಾನಂದ ಕೆ. ನೂತನ ಸದಸ್ಯರನ್ನು ಪರಿಚಯಿಸಿದರು, ಲಯನ್ಸ್ 317 ’ಸಿ’ ಯ ಪ್ರಥಮ ಉಪಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಮಾಜಿ ಜಿಲ್ಲಾ ಗವರ್ನರ್‌ಗಳಾದ ಲಯನ್ ಪ್ರಕಾಶ್ ಟಿ ಸೋನ್ಸ್, ಲಯನ್ ಜಯಕರ ಶೆಟ್ಟಿ ಹಾಗೂ ಪ್ರಾತೀಯ ಅಧ್ಯಕ್ಷ ಲಯನ್ ಡಾ. ಬಾಲಕೃಷ್ಣ ಶೆಟ್ಟಿ, ವಲಯಾಧ್ಯಕ್ಷ ವಿಶ್ವನಾಥ ಶೆಟ್ಟಿ,. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ಚೇತನ್ ಹೆಗ್ಡೆಯವರು ಮುಂದಿನ ದಿನಗಳಲ್ಲಿ ಈ ಕ್ಲಬ್‌ನ್ನು ಸುದೃಡವಾಗಿ ಬೆಳೆಸುತ್ತೆನೆಂದು ತಿಳಿಸಿದರು. ಜಿಲ್ಲಾ ಸಂಪುಟ ಸದಸ್ಯರಾದ ಸತೀಶ್ ಶೆಟ್ಟಿ ಅಂಬಲಪಾಡಿ, ಕಿರಣ್ ರಂಗಯ್ಯ, ಡಾ. ನೇರಿ ಕರ್ನೇಲಿಯೊ, ಪ್ರಾಂತೀಯ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಪ್ರಾಂತೀಯ ಪೈಲಟ್ ಡಾ. ಎಂ.ವಿ ಕುಲಾಲ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಡಾ. ರಾಜೇಂದ್ರ ಕೆ ಕಾರ್ಯಕ್ರಮನ್ನು ನಿರೂಪಿಸಿ, ಖಜಾಂಚಿ ಲಿಡಿಚರ್ ಕಿರಣ್ ಕುಮಾರ್ ಕೆ. ವಂದಿಸಿದರು.

Leave a Reply

Your email address will not be published. Required fields are marked *

sixteen − thirteen =