ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೈತ ವಿರೋಧಿ ಕೃಷಿ ಕಾನೂನು ತಕ್ಷಣ ಹಿಂಪಡೆಯಬೇಕು ಎಂದು ರಾಷ್ಟ್ರವ್ಯಾಪಿ ಕರಾಳ ದಿನಾಚರಣೆಯನ್ನು ಪ್ರತಿಭಟನೆಯ ಮೂಲಕ ಕಿಸಾನ್ ಮೊಚಾ೯ ಹಾಗೂ ಕೇಂದ್ರೀಯ ಕಾಮಿ೯ಕ ಸಂಘಟನೆಗಳ ಕರೆಯ ಮೇರೆಗೆ ಬೈಂದೂರು ಸಿಐಟಿಯು ಕಚೆರಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಕರಾಳ ದಿನಾಚರಣೆ ಹಾಗೂ ಪ್ರತಿಭಟನೆ ಕಾಯ೯ಕ್ರಮ ನಡೆಯಿತು.
ಈ ಸಂದರ್ಭ ಕಾಮಿ೯ಕ ಮುಖಂಡರಾದ ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ ಮೊಗವೀರ ಹಾಗೂ ಕೋಣಿ ವೆಂಂಟೇಶ್ ನಾಯಕ್ ಮೊದಲಾದವರು ಭಾಗವಹಿಸಿದ್ದರು.