‘ಈ ಭೂಮಿ ನಮ್ಮದು’ ಪರಿಸರ ಜಾಗೃತಿ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಸಹಯೋಗದಲ್ಲಿ ಕೋಣಿಯ ಕೆ ಜಿ ಜಗನ್ನಾಥರಾವ್ ಸರ್ಕಾರಿ ಪ್ರೌಢಶಾಲೆ ಇಲ್ಲಿನ ಇಕೋ ಕ್ಲಬ್‌ನ ಜೊತೆಗೂಡಿ ಈ ಭೂಮಿ ನಮ್ಮದು ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Call us

Call us

Call us

ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭೂಮಿಯಲ್ಲಿ ನಮ್ಮಿಂದಾಗಿ ಅಳಿದುಹೋದ ಜೀವಸಂಕುಲಗಳನ್ನು ಉದಾಹರಿಸುತ್ತಾ ಉಳಿದಿರುವ ವೈವಿಧ್ಯಮಯ ಜೀವಸಂಕುಲಗಳ ಹಕ್ಕುಗಳ ರಕ್ಷಣೆ, ಪೋಷಣೆ ಇಂದಿನ ಅಗತ್ಯ ಹಾಗೂ ಅದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.

ಕರಾವಿಪ ಅಧ್ಯಕ್ಷ ಯು ಆರ್ ಮಧ್ಯಸ್ಥರು ವಿದ್ಯಾರ್ಥಿಗಳಿಗೆ ಅವರ ಕರ್ತವ್ಯಗಳನ್ನು ಸರಳವಾಗಿ ವಿವರಿಸಿದರು. ಶುದ್ಧ ನೀರಿನ ಕುರಿತಾದ ಕ್ರಿ.ಶ.೨೦೭೦ರಲ್ಲಿ ಬರೆದ ಒಂದು ಪತ್ರ ಪ್ರಸ್ತುತಪಡಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು. ಶಾಲೆಯ ಇಕೋ ಕ್ಲಬ್‌ನ ಸದಸ್ಯರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಸುರೇಶಪ್ಪ ವಹಿಸಿದ್ದರು. ಕುಂದಾಪುರ ಸಮುದಾಯದ ಖಜಾಂಚಿ ಶ್ರೀ ಬಾಲಕೃಷ್ಣ ಶಾಲೆಯ ಇಕೋ ಕ್ಲಬ್‌ನ ಸಂಚಾಲಕಿ ಪ್ರಮೀಳಾ, ಅಧ್ಯಕ್ಷಕುಮಾರ ಜಯರಾಜ್ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

five × 2 =