ಉಗ್ರರ ಸದೆಬಡಿದ ಭಾರತೀಯ ಸೈನಿಕರು. ಕುಂದಾಪುರದ ಹಲವೆಡೆ ಸಂಭ್ರಮಾಚರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಭಾರತೀಯ ಯೋಧರ ಕಾರ್ಯವನ್ನು ಮತ್ತು ಉಗ್ರರ ದಮನಕ್ಕೆ ಕೇಂದ್ರ ಸರಕಾರ ಕೈಗೊಂಡ ಕ್ರಮವನ್ನು ಶ್ಲಾಘಿಸಿ ಗಂಗೊಳ್ಳಿಯ ನಾಗರಿಕರು ಗಂಗೊಳ್ಳಿಯಲ್ಲಿ ವಿಜಯೋತ್ಸವ ಆಚರಿಸಿದರು.

Call us

Call us

ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ವಠಾರದಲ್ಲಿ ಬಿಜೆಪಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಜಯೋತ್ಸವ ನಡೆಸಿದ್ದಾರೆ. ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಬಿಜೆಪಿ ಮುಖಂಡರಾದ ಉಮಾನಾಥ ದೇವಾಡಿಗ, ಮಂತಿ ಸುರೇಶ ಖಾರ್ವಿ, ಶ್ರೀನಿವಾಸ ಎಂ., ರಾಘವೇಂದ್ರ ಎಸ್.ಗಾಣಿಗ, ಗಂಗೊಳ್ಳಿ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಮಡಿವಾಳ, ಭಗತ್ ಸಿಂಗ್ ಅಭಿಮಾನಿ ಬಳಗದ ಸದಸ್ಯರು ಹಾಗೂ ನಾಗರಿಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕುಂದಾಪುರದಲ್ಲಿ ಎಬಿವಿಪಿ ವಿಧ್ಯಾರ್ಥಿ ಸಂಘಟನೆಯ ಸದಸ್ಯರುಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೇಶದಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿ ದೇಶದ ಭದ್ರತೆ ದೃಷ್ಟಿಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Call us

Call us

abvp-kpur abvp-kpur1

Leave a Reply

Your email address will not be published. Required fields are marked *

3 + 17 =