ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈಗಾಗಲೇ ಕೋವಿಡ್ ಲಾಕ್‌ಡೌನ್ ಅತ್ಯಂತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮದಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ಕೂಡ ಒಂದು. ಸರ್ಕಾರ ಉಡುಪಿ ಜಿಲ್ಲೆಗೆಲಾಕ್‌ಡೌನ್ ವಿನಾಯಿತಿ ನೀಡಿದ್ದರು ಸಹ ಖಾಸಗಿ ಬಸ್ ಮಾಲಕರು ತಮ್ಮ ಬಸ್ಸುಗಳನ್ನು ಪೂರ್ಣ ಪ್ರಮಾದಲ್ಲಿ ಕೋವಿಡ್ ನಿಯಮಗಳೊಂದಿಗೆ ಸಂಚಾರ ಪ್ರಾರಂಭಿಸಲು ಹಲವು ದಿನಗಳೇ ಬೇಕಾಗಬಹುದು ಅಲ್ಲಿಯ ತನಕ ಜನಸಾಮಾನ್ಯರಿಗೆ, ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಮಹಿಳೆಯರಿಗೆ, ಗ್ರಾಮೀಣ ಪ್ರದೇಶದಿಂದ ಉದ್ಯೋಗದ ನಿಮಿತ್ತ ದೂರದ ಊರುಗಳಿಗೆ ಹೋಗುವವರಿಗೆ ಸಂಚಾರ ಕ್ಕೆ ತೀವ್ರವಾದ ತೊಂದರೆಯಾಗುವುದರಿಂದ ಸರ್ಕಾರ ಖಾಸಗಿ ಸಾರಿಗೆ ವ್ಯವಸ್ಥೆಯವರಿಗೆ ಸಂಚಾರ ಪ್ರಾರಂಭ ಮಾಡಲು ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕು ಅಥವಾ ಸಾರಿಗೆ ವ್ಯವಸ್ಥೆ ಸಮರ್ಪಕವಾಗುವವರೆಗೆ ಸರ್ಕಾರಿ ಬಸ್ ವ್ಯಸ್ಥೆಯನ್ನು ಉಡುಪಿ ಜಿಲ್ಲೆಯಾದ್ಯಂತ ಮಾಡಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಗೆ ಹೆಚ್ಚಿನ ಸರ್ಕಾರಿ ಬಸ್ ನೀಡಲು ಕೆ. ವಿಕಾಸ್ ಹೆಗ್ಡೆ ಆಗ್ರಹ
