ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸೆ.21ರ ಸೋಮವಾರ 233 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 55, ಉಡುಪಿ ತಾಲೂಕಿನ 111 ಹಾಗೂ ಕಾರ್ಕಳ ತಾಲೂಕಿನ 47 ಮಂದಿಗೆ ಪಾಸಿಟಿವ್ ಬಂದಿದೆ. 20 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ 135 ಸಿಂಥಮೇಟಿವ್ ಹಾಗೂ 98 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 140, ILI 78, ಸಾರಿ 6 ಪ್ರಕರಣವಿದ್ದು, 5 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 3 ಮಂದಿ ಹೊರ ಜಿಲ್ಲೆಯಿಂದ, ಓರ್ವ ವ್ಯಕ್ತಿ ಹೊರದೇಶದಿಂದ ಬಂದಿದ್ದಾರೆ.
ಇಂದು 66 ಮಂದಿ ಆಸ್ಪತ್ರೆಯಿಂದ ಹಾಗೂ 212 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕಾರ್ಕಳದ 72 ವರ್ಷದ ವೃದ್ಧೆ, ಉಡುಪಿ 70 ವರ್ಷದ ವೃದ್ಧೆ, 84 ವರ್ಷದ ವೃದ್ಧ, ಕುಂದಾಪುರ 66 ವರ್ಷದ ಪುರುಷ ಮೃತಪಟ್ಟಿದ್ದಾರೆ.
619 ನೆಗೆಟಿವ್:
ಈ ತನಕ ಒಟ್ಟು 94320 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 78859 ನೆಗೆಟಿವ್, 15331 ಪಾಸಿಟಿವ್ ಬಂದಿದ್ದು, 130 ಮಂದಿಯ ವರದಿ ಬರುವುದು ಬಾಕಿ ಇದೆ.
1,366 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 15617 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 14114 ಮಂದಿ ಬಿಡುಗಡೆಯಾಗಿದ್ದು, ಒಟ್ಟು 1366 ಸಕ್ರಿಯ ಪ್ರಕರಣಗಳಲ್ಲಿ 815 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 551 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 144 ಮಂದಿ ಮೃತಪಟ್ಟಿದ್ದಾರೆ.