ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಮಂಗಳವಾರ 161 ಪಾಸಿಟಿವ್, 576 ನೆಗೆಟಿವ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸೆ.1ರ ಮಂಗಳವಾರ ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ 57ಕುಂದಾಪುರ ತಾಲೂಕಿನ, ಉಡುಪಿ ತಾಲೂಕಿನ 85 ಹಾಗೂ 13 ಕಾರ್ಕಳ ತಾಲೂಕಿನ ಮಂದಿಗೆ ಪಾಸಿಟಿವ್ ಬಂದಿದೆ. ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.

Call us

ಒಟ್ಟು ಪ್ರಕರಣಗಳಲ್ಲಿ 97 ಸಿಂಥಮೇಟಿವ್ ಹಾಗೂ 64 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 43, ILI 81, ಸಾರಿ 3 ಪ್ರಕರಣವಿದ್ದು, 26 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 8 ಮಂದಿ ವ್ಯಕ್ತಿ ಅಂತರ್ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಇಂದು 65 ಮಂದಿ ಆಸ್ಪತ್ರೆಯಿಂದ ಹಾಗೂ 185 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 78 ವರ್ಷದ ವೃದ್ಧೆ, ಕಾರ್ಕಳದ 58 ವರ್ಷದ ಪುರುಷ ಇಂದು ಮೃತಪಟ್ಟಿದ್ದಾರೆ.

2,307 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 11757 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 9351 ಮಂದಿ ಬಿಡುಗಡೆಯಾಗಿದ್ದು, ಒಟ್ಟು 2307 ಸಕ್ರಿಯ ಪ್ರಕರಣಗಳಲ್ಲಿ 1097 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 1210 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 99 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

18 + fourteen =