ಉತ್ತಮ ಚಾರಿತ್ರ್ಯ ನೀಡುವುದೇ ನಿಜವಾದ ಶಿಕ್ಷಣ: ಮಂಗೇಶ್ ಶೆಣೈ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಿಂದಿನ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸಿದರೆ ಅವರು ಚಾರಿತ್ರ್ಯ ಹೀನರಾಗುತ್ತಾರೆ ಎಂಬ ಮನಸ್ಥಿತಿ ಇತ್ತು. ಆದರೆ ಇಂದು ಸಮಾಜ ಬದಲಾಗಿದೆ, ಯಾವುದು ಚಾರಿತ್ರ್ಯವನ್ನು ದೊರಕಿಸಿಕೊಡುತ್ತದೆಯೋ ಅದೇ ನಿಜವಾದ ಶಿಕ್ಷಣವಾಗಿದೆ ಎಂದು ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಪ್ರತಿಷ್ಟಾನದ ಸಂಚಾಲಕ ಮಂಗೇಶ್ ಶೆಣೈ ಅಭಿಪ್ರಾಯಪಟ್ಟರು.

Click Here

Call us

Call us

Visit Now

ಅವರು ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮೀ ವಿವೇಕಾನಂದರ ೧೫೪ ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ’ಉತ್ತಮನಾಗು-ಉಪಕಾರಿಯಾಗು’ ಇದು ವಿವೇಕಾನಂದರ ಮಾತಾಗಿದೆ. ವಿವೇಕಾನಂದರಿಗೆ ಯುವಕರೆಂದರೆ ಇಷ್ಟವಾಗಿತ್ತು. ಸಮರ್ಥ ಯುವಕರನ್ನು ನೀಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲೆ ಎಂದಿದ್ದರು. ಯುವಜನರಲ್ಲಿ ನಿಸ್ವಾರ್ಥತೆ, ಆಧ್ಯಾತ್ಮಿಕತೆ ಬೆಳೆಯಬೇಕು. ದೇಶದ ಬಗ್ಗೆ ಚಿಂತನೆ ಮಾಡುತ್ತಾ, ದೇಶಕ್ಕೆ ಯಾವುದೇ ಆಪತ್ತು ಎದುರಾದಾಗ ದೇಶದ ರಕ್ಷಣೆಗೆ ಎಲ್ಲರೂ ಒಂದಾಗಬೇಕುಂಬ ನೆಲೆಯಲ್ಲಿ ಅವರು ದೇಶದ ಯುವಕರಿಗೆ ಏಳೀ ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ ಎನ್ನುವ ಸಂದೇಶ ರವಾನಿಸಿದ್ದರು. ಎಲ್ಲರಲ್ಲೂ ದೇಶಾಭಿಮಾನವನ್ನು ತಂದುಕೊಟ್ಟ ಸ್ವಾಮಿ ವಿವೇಕಾನಂದರು ನಿಜವಾಗಿಯೂ ಆಧ್ಯಾತ್ಮಿಕ ತತ್ವಜ್ಞಾನಿಯಾಗಿದ್ದರು. ಎಂದರು.

Click here

Click Here

Call us

Call us

ಸ್ವಾಮಿ ವಿವೇಕಾನಂದರ ಕುರಿತಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅಲ್ಲದೇ ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಪ್ರತಿಷ್ಟಾನದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಕುರಿತಾದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಯು. ಹೆಚ್. ರಾಜರಾಮ್ ಭಟ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ ಪ್ರಾಸ್ತಾವಿಸಿದರು. ವನಿತಾ ಕಾರ್ಯಕ್ರಮ ನಿರೂಪಿಸಿ, ರಂಜಿತಾ ವಂದಿಸಿದರು.

Leave a Reply

Your email address will not be published. Required fields are marked *

eleven + thirteen =