ಉತ್ತಮ ಸಹಕಾರಿ ಪ್ರಶಸ್ತಿ ಪುರಸ್ಕೃತ ಎಸ್. ರಾಜು ಪೂಜಾರಿ ಹಾಗೂ ರತಿ ದಂಪತಿಗೆ ಸನ್ಮಾನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿ.ಎಸ್. ಆಚಾರ್ ಅವರಂತಹ ಧುರೀಣರ ಗರಡಿಯಲ್ಲಿ ಪಳಗಿ ರಾಜಕೀಯದ ಕ್ಷೇತ್ರದಲ್ಲಷ್ಟೇ ಅಲ್ಲದೇ, ಸಹಕಾರ ಕ್ಷೇತ್ರದಲ್ಲಿ ಎರಡು ದಶಕಗಳ ಕಾಲ ತೊಡಗಿಸಿಕೊಂಡು ವಿವಿಧ ಸಹಕಾರಿ ಸಂಘಗಳ ಬೆಳವಣಿಗೆ ನಿರಂತರವಾಗಿ ಶ್ರಮಿಸಿರುವ ಎಸ್. ರಾಜು ಪೂಜಾರಿ ಅವರಿಗೆ ರಾಜ್ಯದ ಉತ್ತಮ ಸಹಕಾರಿ ಪ್ರಶಸ್ತಿ ದೊರೆತಿರುವುದು ಅವರ ಕಾರ್ಯತತ್ಪರತೆಗೆ ದೊರೆತ ಪ್ರತಿಫಲ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದರು.

Call us

Call us

Visit Now

ಅವರು ಇಲ್ಲಿನ ಹಳ್ಳಿಹೊಸೂರು ಶಾಲಾ ಆವರಣದಲ್ಲಿ ಇತ್ತಿಚಿಗೆ ಚಂದನ ಹಾಲಂಬೇರು ಮೂಡನಗದ್ದೆ ಭಾಗದ ನಾಗರಿಕರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಉತ್ತಮ ಸಹಕಾರಿ ಪ್ರಶಸ್ತಿ ಪುರಸ್ಕೃತ ಸಹಕಾರಿ ಧುರೀಣ ಎಸ್. ರಾಜು ಪೂಜಾರಿ ಹಾಗೂ ರತಿ ರಾಜು ಪೂಜಾರಿ ದಂಪತಿಯನ್ನು ಅಭಿನಂದಿಸಿ ಬಳಿಕ ಮಾತನಾಡಿದರು.

Click Here

Click here

Click Here

Call us

Call us

ಸಾಮಾಜಿಕ ರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಏಳು ಬೀಳುಗಳು ಸಾಮಾನ್ಯ. ಆದರೆ ಎಂಥಹ ಸಂದರ್ಭದಲ್ಲಿಯೂ ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವವರು ನಿಜವಾದ ಜನನಾಯಕರೆನಿಸಿಕೊಳ್ಳುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಕಾರ್ಯದರ್ಶಿ ನಾಗರಾಜ ಗಾಣಿಗ ಅವರನ್ನು ಗೌರವಿಸಲಾಯಿತು. ಸ್ಥಳೀಯರಾದ ರಾಘವೇಂದ್ರ ಗಾಣಿಗ, ಸುಬ್ಬಯ್ಯ ಗಾಣಿಗ, ಹಿರಿಯ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರ ಕಾಂಗ್ರೆಸ್ ಕಿಸಾಸ್ ಘಟಕದ ಕಾರ್ಯದರ್ಶಿ ವೀರಭದ್ರ ಗಾಣಿಗ ಪ್ತಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಗಾಣಿಗ ಕುಡ್ಲುಮನೆ ಸ್ವಾಗತಿಸಿ, ಮಂಜುನಾಥ ಗಾಣಿಗ ಮೂಡನಗದ್ದೆ ವಂದಿಸಿದರು. ಆಲಂದೂರು ಮಂಜುನಾಥ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

twelve − 11 =