ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 65ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಗಂಗೊಳ್ಳಿಯ ಶಶಾಂಕ್ ಶೆಣೈ ಪ್ರಾರ್ಥಿಸಿದರು. ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರಿನ ಸಂಚಾಲಕಿ ಮನೋರಮ ಕೆ. ಅಧ್ಯಕ್ಷ ಸ್ಥಾನ ವಹಿಸಿದ್ದರು. ದೇವಕಿ ಸುರೇಶ್ ಪ್ರಭು, ತಲ್ಲೂರು ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸದಾನಂದ ಶೆಣೈ ಪರ್ಕಳ, ಉಡುಪಿಯ ಖ್ಯಾತ ಉದ್ಯಮಿ ವಿಶ್ವನಾಥ ಶೆಣೈ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು
ಗೊಂಬೆಯಾಟದ ಪ್ರೋತ್ಸಾಹಕರಾದ ನರೇಂದ್ರ ಹೆಗ್ಡೆ, ತಲ್ಲೂರು ಮತ್ತು ಗೊಂಬೆಯಾಟ ಅಕಾಡೆಮಿಯ ಹಿತೈಶಿಯಾದ ರಾಜಶ್ರೀ ಆರ್. ಪೈ ಇವರನ್ನೂ ಸತ್ಕರಿಸಲಾಯಿತು. ನಂತರ ದೇವಕಿ ಸುರೇಶ್ ಪ್ರಭು ತಲ್ಲೂರು ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು.