ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ತಿಂಗಳ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 68 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

Call us

Call us

Call us

ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ ಪೈ, ವಸಂತಿ ಆರ್. ಪಂಡಿತ್, ಯಕ್ಷಗಾನ ಭಾಗವತ ಉಮೇಶ್ ಸುವರ್ಣ, ರೇವತಿ ಸುವರ್ಣ, ಶಿಕ್ಷಕ ಉದಯ ಭಂಡಾರ್‌ಕಾರ್, ಮಾಲತಿ ಪಿ. ಬಂಗೇರ, ಸುಜಾತಾ ಎನ್. ಕುಂದರ್ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Call us

Call us

ಶ್ರೀ ರಾಮ ಭಜನಾ ಮಂದಿರ ಮಹಿಳಾ ತಂಡ, ಬೀಜಾಡಿ, ಗೋಪಾಡಿ ಇದರ ಮುಖ್ಯಸ್ಥೆ ಮಾಲತಿ ಪಿ. ಬಂಗೇರ ಮತ್ತು ಶ್ರೀ ರಾಮ ನಾಮ ಸಂಕೀರ್ತನ ಮಹಿಳಾ ಭಜನಾ ಮಂಡಳಿ, ಕುಂಭಾಶಿಯ ಮುಖ್ಯಸ್ಥೆ ಸುಜಾತಾ ಎನ್. ಕುಂದರ್ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಹಾವೇರಿಯ ಮಹಾಂತೇಶ್ ಲಮಾಣಿಯವರನ್ನು ಗೌರವಿಸಲಾಯಿತು.

ನಂತರ ಶ್ರೀ ರಾಮ ಭಜನಾ ಮಂದಿರ ಮಹಿಳಾ ತಂಡ, ಬೀಜಾಡಿ, ಗೋಪಾಡಿ ಮತ್ತು ಶ್ರೀ ರಾಮ ನಾಮ ಸಂಕೀರ್ತನ ಮಹಿಳಾ ಭಜನಾ ಮಂಡಳಿ, ಕುಂಭಾಶಿ ಇವರ ಕುಣಿತದ ಭಜನೆ ಪ್ರೇಕ್ಷಕರನ್ನು ರಂಜಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರೂಪಿಸಿದ್ದರು.

Leave a Reply

Your email address will not be published. Required fields are marked *

seventeen − 7 =