ಬೈಂದೂರು: ಇಲ್ಲಿನ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಶ್ರೀ ಗುರುವಿವೇಕ ಯೋಗಸಂಘದಿಂದ ರಾಷ್ಟ್ರೀಯ ವೈದ್ಯ ದಿನಾಚರಣೆ ಜರುಗಿತು.
ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ವೈದ್ಯೋನಾರಾಯಣೋ ಹರಿಃ ಎನ್ನುವ ನುಡಿಯಂತೆ ರೋಗಿಗಳ ಪಾಲಿಗೆ ವೈದ್ಯರು ಸಾಕ್ಷಾತ್ ದೇವರಿದ್ದಂತೆ. ಹಿಂದಿನಿಂದಲೂ ಸಮಾಜದಲ್ಲಿ ವೈದ್ಯರಿಗೆ ವಿಶೇಷವಾದ ಸ್ಥಾನಮಾನ. ವೈದ್ಯರೂ ಕೂಡಾ ರೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.
ಸೇವೆಯ ಧ್ಯೇಯ ಹೊಂದಿದ ಆರೋಗ್ಯ ಕ್ಷೇತ್ರ ಇಂದು ವ್ಯಾವಹಾರಿಕ ಕ್ಷೇತ್ರವಾಗಿದೆ. ಆಸ್ಪತ್ರೆಗಳು ಹೂಡಿಕೆಗೆ ಅತಿಯೋಗ್ಯ ಸ್ಥಳಗಳೆನಿಸಿವೆ. ವೈದ್ಯಕೀಯ ವೃತ್ತಿಯಲ್ಲಿಲ್ಲದವರು ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಅಲ್ಲೆಲ್ಲಾ ವೈದ್ಯರು ಸಂಬಳಕ್ಕೆ ದುಡಿಯುವ ನೌಕರರಂತಾಗಿದೆ. ಇದರ ಕೆಟ್ಟ ಪರಿಣಾಮ ರೋಗಿಗಳ ಮೇಲಾಗುತ್ತಿದೆ. ಆಸ್ಪತ್ರೆಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ.
ಎಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ವೈ. ಮಂಗೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಡಾ. ಯು. ವಿ. ಮಯ್ಯ, ಪತ್ರಕರ್ತ ನರಸಿಂಹ ಬಿ. ನಾಯಕ್ ಉಪಸ್ಥಿತರಿದ್ದರು. ಯೋಗಗುರು ಮಂಜುನಾಥ ಎಸ್. ಬಿಜೂರು ಪ್ರಾಸ್ತಾವಿಸಿ, ಸ್ವಾಗತಿಸಿದರು. ತುಳಸೀದಾಸ್ ಗಡಿಯಾರ ವಂದಿಸಿದರು.