ಉಪ್ಪುಂದದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್ ಉದ್ಘಾಟನೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂಘಟನೆಯ ಏಳಿಗೆಗೋಸ್ಕರ ಯಾವುದೇ ಫಲಾಪೇಕ್ಷೆಗಳಿಲ್ಲದೇ ಸಮಾನ ಮನಸ್ಕರು ಒಟ್ಟಾಗಿ ಮಾಡಿದ ಸ್ವಾರ್ಥರಹಿತವಾದ ಶ್ರಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಬುದ್ಧವಂತಿಕೆ, ಕಾರ್ಯಚತುರತೆ ಹಾಗೆಯೇ ಹಿರಿಯರು ಹಾಕಿಕೊಟ್ಟ ವಿಚಾರಧಾರೆಗಳನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಕರಸಾಸಂ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

Call us

Call us

Click Here

Visit Now

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್ನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಶಕ್ತಿವಂತರಿಗಿಂತ ಭಕ್ತಿವಂತರು ಹೆಚ್ಚಾಗಿದ್ದರು. ಆದರೆ ಈಗ ಕೆಲವು ಸಂಘಟನೆಗಳಲ್ಲಿ ಶಕ್ತಿವಂತರೇ ಮೇಲ್ಗೈ ಸಾಧಿಸಿರುವುದರಿಂದ ಪರಸ್ಪರ ಅನುಮಾನಗಳು, ಭಿನ್ನಾಭಿಪ್ರಾಯಗಳು ಕಂಡುಬರುತ್ತಿದ್ದು, ಸಮಾಜದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಟ್ರಸ್ಟ್ ಹೆಸರೇ ಸೂಚಿಸುವಂತೆ ಪರಸ್ಪರ ವಿಶ್ವಾಸದಿಂದ ಸರ್ವರೂ ಸಮಾನರು ಎಂಬ ನೆಲೆಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ನಮ್ಮ ಜೀವನದ ಸಾರ್ಥಕತೆ ಕಾಣಬಹುದು. ಯಕ್ಷಗಾನ ಕಲೆ ಉಳಿಸುವ ನಿಟ್ಟಿನಲ್ಲಿ ಆಸಕ್ತರಿಗೆ ಯಕ್ಷಗಾನ, ಮುಖವರ್ಣಿಕೆ ಉಚಿತ ತರಬೇತಿ ಮತ್ತು ಅಶಕ್ತ ಯಕ್ಷ ಕಲಾವಿದರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಉಪ್ಪುಂದ ಪರಿಸರದ ಕಲಾವಿದರು ಹುಟ್ಟುಹಾಕಿದ ಈ ಟ್ರಸ್ಟ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

Click here

Click Here

Call us

Call us

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ರಘುರಾಮ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ವಿದ್ವಾನ್ ಶಂಕರನಾರಾಯಣ ಭಟ್ ಶುಭಾಶಂಸನೆಗೈದರು. ಜಿಪಂ ಸದಸ್ಯ ಸುರೇಶ ಬಟ್ವಾಡಿ, ಉದ್ಯಮಿಗಳಾದ ಬಿ. ಜಿ. ಲಕ್ಷ್ಮೀಕಾಂತ್ ಬೆಸ್ಕೂರ್, ಯು. ಎ. ಮಂಜು ದೇವಾಡಿಗ, ಬಿ. ಅಣ್ಣಪ್ಪ ಖಾರ್ವಿ ಕರ್ಕಿಕಳಿ, ಗಣೇಶ ಗಾಣಿಗ ಉಪ್ಪುಂದ, ಟ್ರಸ್ಟಿನ ಅಧ್ಯಕ್ಷ ಉಪ್ಪುಂದ ನಾಗೇಂದ್ರರಾವ್, ಕಾರ್ಯದರ್ಶಿ ಶ್ರೀಧರ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಶ್ರೀಧರ ಸ್ವಾಗತಿಸಿ ಗಿರೀಶ್ ಶ್ಯಾನುಭಾಗ್ ನಿರೂಪಿಸಿ, ವಂದಿಸಿದರು. ನಂತರ ಈ ಟ್ರಸ್ಟಿನ ವೃತ್ತಿಪರ ಕಲಾವಿದರಿಂದ ’ಪಿಂಡೋದ್ಭ’ ಯಕ್ಷಗಾನ ಪ್ರದರ್ಶನ ನಡೆಯಿತು.

 

Leave a Reply

Your email address will not be published. Required fields are marked *

3 + 16 =