ಉಪ್ಪುಂದ: ಆಧುನಿಕ ಮಾರಾಟ ಮಳಿಗೆ ಮತ್ತು ಸಂಗ್ರಹಣಾ ಕೇಂದ್ರ ಕಟ್ಟಡಕ್ಕೆ ಶಿಲನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಉಪ್ಪುಂದದಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಮಂಗಳೂರು, ಕರ್ನಾಟಕ ತೋಟಗಾರಿಕಾ ಮಹಾಮಂಡಲ ಬೆಂಗಳೂರು ಇವರ ಮೂಲಕ ರಾಜ್ಯ ವಲಯ ಯೋಜನೆಯ ಅನುದಾನದಿಂದ ೪೦ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಧುನಿಕ ಮಾರಾಟ ಮಳಿಗೆ ಮತ್ತು ಸಂಗ್ರಹಣಾ ಕೇಂದ್ರ ಕಟ್ಟಡಕ್ಕೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಅವರು ಶಿಲನ್ಯಾಸ ನೆರವೇರಿಸಿದರು.

ಈ ಸಂದರ್ಭ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ, ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಸದಸ್ಯ ಐ ನಾರಾಯಣ, ಗ್ರಾಮಸ್ಥ ಎಸ್ ಮದನ್‌ಕುಮಾರ್ ಉಪ್ಪುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two × five =