ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಇಂಡಿಯನ್ ಸೀನಿಯರ್ ಛೇಂಬರ್ ಇವರ ವತಿಯಿಂದ ಇಲ್ಲಿನ ಬಾಯಂಹಿತ್ಲು ಪ್ರದೇಶದಲ್ಲಿ ‘ಬೀದಿ ಸ್ವಚ್ಛತಾ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯದಲ್ಲಿ ಇಂಡಿಯನ್ ಸೀನಿಯರ್ ಛೇಂಬರ್ ರಾಷ್ಟ್ರೀಯ ಸಂಯೋಜಕರಾದ ಸೀನಿಯರ್ ಗಿರೀಶ್ ಶ್ಯಾನುಭಾಗ್, ಇಂಡಿಯನ್ ಸೀನಿಯರ್ ಛೇಂಬರ್ ಅಧ್ಯಕ್ಷ ಎನ್. ಕೆ .ಬಿಲ್ಲವ, ಛೇಂಬರ್ ನ ಖಜಾಂಚಿ ಹಾಗೂ ಉಪ್ಪುಂದ ಪಂಚಾಯತ್ ಉಪಾಧ್ಯಕ್ಷರಾದ ಸೀನಿಯರ್ ದಿವಾಕರ್ ಶೆಟ್ಟಿ, ಕಾರ್ಯದರ್ಶಿ ಸೀನಿಯರ್ ಶ್ರೀಕಾಂತ್ ಕಾಮತ್, ನಿಕಟಪೂರ್ವ ಅಧ್ಯಕ್ಷ ಸೀನಿಯರ್ ಉದಯ್ ಡಿ ಆರ್, ನಿಕಟಪೂರ್ವ ಕಾರ್ಯದರ್ಶಿ ಸೀನಿಯರ್ ರಾಮಕೃಷ್ಣ ದೇವಾಡಿಗ, ಸದಸ್ಯರಾದ ಸೀನಿಯರ್ ಪ್ರಭಾಕರ್ ಶೆಟ್ಟಿ, ಸೀನಿಯರ್ ರವಿರಾಜ ಶೆಟ್ಟಿ, ಉಪ್ಪುಂದ ಜೇಸಿ ಸುಪ್ರೀಂನ ಅಧ್ಯಕ್ಷ ಜೇಸಿ ಮಂಜುನಾಥ ದೇವಾಡಿಗ ಪಾಲ್ಗೊಂಡಿದ್ದರು.