ಉಪ್ಪುಂದ: ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಅವರಿಗೆ ಸನ್ಮಾನ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂಘಟನೆಗಳು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಉಪ್ಪುಂದ ಜೇಸಿಐ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಪ್ರೇಕ್ಷಕರಲ್ಲಿ ಹೊಸ ಅಭಿರುಚಿ ಮೂಡಿಸುವ ಜತೆಗೆ ಹೆಚ್ಚುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಜಿಪಂ ಮಾಜಿ ಸದಸ್ಯ ಎಸ್. ಮದನ್ ಕುಮಾರ್ ಹೇಳಿದರು.

Call us

Call us

ಉಪ್ಪುಂದ ಜೇಸಿಐ ಘಟಕದ ’ಸ್ನೇಹಜೀವಿ-೨೦೧೭’ರ ಸಪ್ತಾಹದ ಐದನೇ ದಿನದ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜೇಸಿಐನಿಂದ ಗ್ರಾಮೀಣ ಪ್ರದೇಶದ ಯುವಜನರಲ್ಲಿ ಆತ್ಮವಿಶ್ವಾಸದ ಜತೆಗೆ ಸೇವಾ ಮನೋಭಾವ ಮೂಡಿಸುವ ಕೆಲಸವಾಗುತ್ತಿದೆ. ದೇಶದ ಉನ್ನತೀಕರಣಕ್ಕೆ ಸಂಸ್ಥೆ ಮುನ್ನುಡಿ ಬರೆಯುತ್ತಿದ್ದು, ಯುವಪೀಳಿಗೆಯನ್ನು ಸಮಜದಲ್ಲಿ ಸುದೃಢವಾಗಿಸಲು ಅವರಿಗೆ ತರಬೆತಿಗಳನ್ನು ನೀಡುವ ಮೂಲಕ ತಯಾರುಗೊಳಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ್ಪುಂದ ಘಟಕದ ಅಧ್ಯಕ್ಷ ಮಂಜುನಾಥ ದೇವಾಡಿಗ ಸ್ವಾಗತಿಸಿದರು. ಈ ಸಂದರ್ಭ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಎಂ. ಮತ್ತು ಕರಾಟೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ವಿಶ್ವನಾಥ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ, ದಸ್ತಾವೇಜು ಬರಹಗಾರ ಚಂದ್ರ ಹಳಗೇರಿ, ತಾರಾಪತಿ ಮೀನುಗಾರರ ಸಹಕರಿ ಸಂಘದ ಅಧ್ಯಕ್ಷ ಎ. ಆನಂದ ಖಾರ್ವಿ, ನಿವೃತ್ತ ಶಿಕ್ಷಕ ಯು. ರಾಜಾರಾಮ ಭಟ್, ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷ ಯು. ಎ. ಮಂಜು ದೇವಾಡಿಗ, ಶಂಕರನಾರಾಯಣ ಜೇಸಿ ಘಟಕದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪೂರ್ವಾಧ್ಯಕ್ಷರಾದ ವೈ. ಮಂಗೇಶ್ ಶ್ಯಾನುಭಾಗ್, ನರಸಿಂಹ ಹಳಗೇರಿ, ಜ್ಯೂ. ಜೇಸಿ ಅಧ್ಯಕ್ಷ ರತನ್ ಉಪ್ಪುಂದ ಮತ್ತಿತರರು ಉಪಸ್ಥಿತರಿದ್ದರು. ಸಪ್ತಾಹ ಸಭಾಪತಿ ಕಾರಿಕಟ್ಟೆ ಪ್ರದೀಪ್ ಶೆಟ್ಟಿ ವಂದಿಸಿದರು. ನಂತರ ಕುಂದಾಪುರದ ನಮ್ ಕಲಾತಂಡ ಕಲಾವಿದರಿಂದ ’ಗಂಡ್ ಗನಾದ್ ಕಾಂಬ್ದಾರ್ ಕಾಣಿ’ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

20 − eight =