ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಉಪ್ಪುಂದ ಜೆಸಿಐನ ಸರ್ವ ಸದಸ್ಯರು ತಮಗೆ ವಿದ್ಯೆ ನೀಡಿದ ಗುರುಗಳಾದ .ಐ. ನಾರಾಯಣ್ ಮಾಸ್ಟರ್ ಹಾಗೂ ಶಾರದಾ ದಂಪತಿಗಳ ಮನೆಗೆ ಭೇಟಿ ನೀಡಿ ಗೌರವಿಸಿದರು.
ಈ ಸಂದರ್ಭ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು, ಪೂರ್ವಾಧ್ಯಕ್ಷ ಜೇಸಿ ಸೆನೆಟರ್ ಪ್ರಕಾಶ್ ಭಟ್, ಪುರಂದರ್ ಖಾರ್ವಿ, ಉದಯ್ ಡಿ.ಆರ್, ಕಾರ್ಯಕ್ರಮದ ನಿರ್ದೇಶಕರಾದ ನರಸಿಂಹ ದೇವಾಡಿಗ, ಜಗದೀಶ್ ದೇವಾಡಿಗ, ಸದಸ್ಯರಾದ ಸೌಮ್ಯಾ, ಸಂಗೀತಾ ಪುರಂದರ್, ಸುಪರ್ಣಾ, ಗಣೇಶ್ ಗಾಣಿಗ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶಿವಾನಂದ್, ಗೌರೀಶ್, ಗುರುರಾಜ ಹೆಬ್ಬಾರ್, ಪಾಂಡುರಂಗ ದೇವಾಡಿಗ, ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಲಯಾಧಿಕಾರಿ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರೂಪಿಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವಂದನಾರ್ಪಣೆಗೈದರು. ರಾಮಕೃಷ್ಣ ಖಾರ್ವಿ, ವಾಣಿ ವಾಚಿಸಿದರು