ಉಪ್ಪುಂದ ಮಡಿಕಲ್, ಅಳ್ವೆಗದ್ದೆ ಕಡಲತೀರ. ಬೈಂದೂರು ಚರ್ಚ್‌ಗುಡ್ಡ

ಅಳ್ವೆಗದ್ದೆ ಕಡಲತೀರ

ಶಿರೂರು ರಾಷ್ಟ್ರಿಯ ಹೆದ್ದಾರಿ 66ರಿಂದ 3 ಕಿ.ಮೀ ದೂರದಲ್ಲಿರುವ ಅಳ್ವೆಗದ್ದೆ ಕಡಲತೀರ ನಿಸರ್ಗ ಸೌಂದರ್ಯದಿಂದ ಕಂಗೊಳಿಸುತ್ತದೆ. ಇದು ಸಮುದ್ರ ಹಾಗೂ ನದಿಗಳ ಸಂಗಮ ಸ್ಥಾನ ಹಾಗೂ ಕಿರು ಬಂದರು ಪ್ರದೇಶವಾಗಿದೆ. ಸಮುದ್ರದ ನಡುವಲ್ಲಿರುವ ಬಂಡೆ ಹಾಗೂ ಬಂಡೆಯ ಅಪ್ಪಳಿಸುವ ತೆರೆಗಳನ್ನು ನೋಡುವುದೇ ಮನಮೋಹಕವಾಗಿರುತ್ತದೆ. ಬಂಡೆಯ ತನಕ ತೆರಳಲು ಕಲ್ಲಿನ ಹಾಸು ಇದ್ದು ಇತ್ತಿಚಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಉಪ್ಪುಂದ ಮಡಿಕಲ್ ಕಡಲತೀರ

ಉಪ್ಪುಂದದ ರಾಷ್ಟ್ರಿಯ ಹೆದ್ದಾರಿಯಿಂದ ಮಡಿಕಲ್ ತೆರಳುವ ಮಾರ್ಗವಾಗಿ 3 ಕಿ.ಮೀ ಕ್ರಮಿಸಿದರೆ ಉಪ್ಪುಂದದ ಈ ಕಡಲತಡಿ ಎದುರುಗೊಳ್ಳುತ್ತದೆ. ಸೋಮೇಶ್ವರ, ಅಳ್ವೆಗದ್ದೆ ಕಡಲತೀರಕ್ಕಿಂತ ಸ್ವಲ್ಪ ಭಿನ್ನವಾಗಿಯೇ ಕಾಣಿಸಿಕೊಂಡಿರುವ ಮಡಿಕಲ್ ಕಡಲತೀರ ಕೂಡ ಪ್ರವಾಸೋದ್ಯಮ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ.

ಚರ್ಚ್‌ಗುಡ್ಡ

ಕ್ರೈಸ್ತರ ಪವಿತ್ರ ಸ್ಥಳವಾಗಿರುವ ಚರ್ಚ್‌ಗುಡ್ಡ ಪ್ರವಾಸಿಗರಿಗೂ ಅಚ್ಚುಮೆಚ್ಚು. ಬೈಂದೂರು ಚರ್ಚ್‌ರಸ್ತೆಯ ಮೂಲಕ ಸಾಗಿ ಮುಂದೆ ಚರ್ಚ್ ಗುಡ್ಡಕ್ಕೆ ತೆರಳಲು ರಸ್ತೆ ಇದ್ದು ಇಲ್ಲಿಂದ ಸಮುದ್ರ ಹಾಗೂ ಕೂಸಳ್ಳಿ ಜಲಪಾತವನ್ನೂ ದೂರದಿಂದ ವೀಕ್ಷಿಸಬಹುದಾಗಿದೆ.

Leave a Reply

Your email address will not be published. Required fields are marked *

fourteen + 3 =