ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ರಾಣಿಬಲೆ ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷರಾಗಿ ತಿಮ್ಮಪ್ಪ ಖಾರ್ವಿ ಪುನರಾಯ್ಕೆಗೊಂಡಿದ್ದಾರೆ.
ಅವಿರೋಧವಾಗಿ ನಡೆದ ಸಂಘದ ಆಯ್ಕೆ ಪ್ರಕ್ರಿಯೆಯಲ್ಲಿ ಎ.ಶ್ರೀನಿವಾಸ ಖಾರ್ವಿ, ನಾಗೇಶ ಖಾರ್ವಿ, ಎಸ್. ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ನವೀನ ಖಾರ್ವಿ, ಸುರೇಶ ಖಾರ್ವಿ, ಸೋಮಶೇಖರ ಖಾರ್ವಿ, ಶಂಕರ ಖಾರ್ವಿ, ಶರತ್ ಖಾರ್ವಿ ನಿರ್ದೇಶಕರುಗಳಾಗಿ ಆಯ್ಕೆಗೊಂಡಿದ್ದಾರೆ.