ಉಪ್ಪುಂದ: ಶ್ರೀ ಲಕ್ಷ್ಮೀವೆಂಕಟರಣ ದೇವರ ಪುನರ್‌ಪ್ರತಿಷ್ಟೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಅಕ್ಷಯತೃತೀಯದ ಶುಭದಿನ ಉಪ್ಪುಂದ ಜಿಎಸ್‌ಬಿ ಸಮಾಜ ಬಾಂಧವರ ಶ್ರೀ ಲಕ್ಷ್ಮೀವೆಂಕಟರಣ ದೇವರ ಪುನರ್‌ಪ್ರತಿಷ್ಟೆ ದೇವಳದ ಪರ್ಯಾಯ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ವೈಭವದಿಂದ ಜರುಗಿತು.

Call us

Call us

Visit Now

ಎ.15ರ ಮೇಷ ಸಂಕ್ರಂತಿಯಂದು ದೇವರ ಪ್ರಾರ್ಥನೆಯೊಂದಿಗೆ ಚೋರಶಾಂತಿ, ಶ್ವಾನಶಾಂತಿ, ಗರ್ಭಗೃಹಶುದ್ದಿಯಿಂದ ಆರಂಭಗೊಂಡ ಧಾರ್ಮಿಕ ವಿಧಿಗಳು ಎ.16ರ ಸೋಮವತಿ ಅಮಾವಾಸ್ಯೆಯಂದು ಪಂಚಗವ್ಯ ಹವನ, ಪವಮಾನ ಪಾರಾಯಣ, ಪ್ರಾಯಶ್ಚಿತ ಹವನ, ಶುದ್ಧಕಲಶ, ರಾಕ್ಷೋಘ್ನಹವನ, ವಾಸ್ತುಹವನ, ವಾಸ್ತುಬಲಿ, ಪ್ರಾಕಾರಬಲಿ ನಡೆಯಿತು. ಎ.17ರಂದು ನವಗೃಹಹವನ, ಗರ್ಭಗೃಹ ಪೀಠಕ್ಕೆ ನವಕಲಶ, ಗಣಪತಿಹವನ, ದ್ವಾದಶಕಲಶ ಸಂಪ್ರೋಕ್ಷಣೆ, ವಿಗ್ರಹಗಳ ಸಪ್ತಾಧಿವಾಸ ಪೂಜೆ, ಕಲಶಾಭಿಷೇಕ ನಡೆಯಿತು. ಬುಧವಾರ ಸುಪ್ರಭಾತ ಪೂಜೆ, ನಿಲಂಜನ ಆರತಿ, ಸಾನಿಧ್ಯಹವನ, 108 ಕಲಶಾಭಿಷೇಕ, ಸಾನಿಧ್ಯಹವನ, ಪೂರ್ಣಾಹುತಿಯೊಂದಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಪುನರ್‌ಪ್ರತಿಷ್ಟೆ ನಡೆಯಿತು. ರಾತ್ರಿ ದೀಪೋತ್ಸವ, ಅವಭೃತಸ್ನಾನ, ವಸಂತಪೂಜೆ ಜರುಗಿತು.

Click here

Call us

Call us

ಶ್ರೀಲಕ್ಷ್ಮೀವೆಂಕಟರಮಣ ಟ್ರಸ್ಟ್‌ನ ಅಧ್ಯಕ್ಷ ದಾಮೋದರ ಶೆಣೈ, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್ ಹಾಗೂ ಟ್ರಸ್ಟಿನ ಸದಸ್ಯರ ಮಾರ್ಗದರ್ಶನದಿಂದ ನಡೆದ ಕಾರ್ಯಕ್ರಮಕ್ಕೆ ಊರ-ಪರವೂರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸಿದರು.

ಈ ದೇವಸ್ಥಾನದಲ್ಲಿ ಎ.16 ರಂದು ಗರ್ಭಗುಡಿಯ ಹೊರಗಿನ ಹಾಗೂ ಗರ್ಭಗುಡಿಯ ಬಾಗಿಲನ್ನು ಆಯುಧಗಳಿಂದ ಮೀಟಿ ತೆಗೆದು ಅಲ್ಲಿರುವ ಬೆಳ್ಳಿ ಕವಚ ಹೊಂದಿರುವ ದೇವರ ಮೂರ್ತಿ, ಎರಡು ಪ್ರಭಾವಳಿ, ಬೆಳ್ಳಿಯ ಪರಿಕರಗಳು, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು. ದೇವಳದ ಹಿಂದಿರುವ ಮರ್ಲಮ್ಮಬೆಟ್ಟು (ದೈವದಮನೆ) ಎಂಬಲ್ಲಿ ದೇವರ ಪೀಠ, ಬೆಳ್ಳಿ ಕವಚ ರಹಿತ ದೇವರ ಚಂದನ ಮೂರ್ತಿ, ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಬೆಳ್ಳಿಯ ಪ್ರಭಾವಳಿ ಹಾಗೂ ಇತರೇ ಸ್ವಲ್ಪ ಬೆಳ್ಳಿಯ ಪರಿಕರಗಳು ಸಿಕ್ಕಿದ್ದು, ಇನ್ನೂ ಸುಮಾರು 12,72,500 ರೂ. ಮೌಲ್ಯದ 25 ಕೆಜಿ ಬೆಳ್ಳಿ ಹಾಗೂ ಚಿನ್ನಾಭರಣಗಳು ಪತ್ತೆಯಾಗಬೇಕಿದೆ.

 

Leave a Reply

Your email address will not be published. Required fields are marked *

20 − 20 =