ಉಪ್ಪುಂದ: ಶ್ರೀ ಸುಧೀಂದ್ರ ತೀರ್ಥರ ಆರಾಧನಾ ಮಹೋತ್ಸವ

Call us

ಬೈಂದೂರು: ಯತಿ ಪರಂಪರೆಯಲ್ಲಿ ಸಮಾಜಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ ಹಾಗೂ ಏಳು ದಶಕಗಳಿಂದ ನಮ್ಮ ಮಾರ್ಗದರ್ಶಕರಾಗಿದ್ದ ಸಾಕ್ಷಾತ್ ಪರಮಾತ್ಮನ ಸ್ವರೂಪಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಪಡೆದದ್ದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪೂರ್ವಜನ್ಮದ ಸುಕೃತಫಲ ಎಂದು ಪುರೋಹಿತ ಗಣೇಶ ಭಟ್ ಹೇಳಿದರು.

Call us

Call us

ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದಾನಾಮ ಆರಾಧನೋತ್ಸವದ ಅಂಗವಾಗಿ ಗುರುವಾರ ತಡರಾತ್ರಿವರೆಗೂ ನಡೆದ ಹರಿಗುರು ಸ್ಮರಣೆಯ ಮಹತ್ವ ವಿವರಿಸಿ ಮಾತನಾಡಿದರು. ಕೇವಲ ಸಕ್ಕರೆ, ಬೆಲ್ಲ ಹಾಕಿ ಮಾಡಿದ ಸಿಹಿಪದಾರ್ಥಗಳನ್ನು ತಿಂದು ಬಾಯಿ ಚಪ್ಪರಿಸುತ್ತೇವೆ ಹೊರತು, ದೈವ, ಗುರು, ತಾಯಿ-ತಂದೆ, ದೇಶಭಕ್ತಿಯಲ್ಲಿರುವ ಸಿಹಿ ನಮಗೆ ತಿಳಿಯದಿರುವುದು ದೌರ್ಭಾಗ್ಯ. ಪೀಠ, ಪೌರೋಹಿತ್ಯ, ದೈವೀಕ ಸ್ಥಳಗಳು ನಮಗೆ ಗುರು ಪರಂಪರೆ ಮಾರ್ಗದರ್ಶನದಿಂದ ದೊರಕಿದೆ. ಜೀವನ ಪರಿಪಕ್ವವಾಗಲು ಪೀಠದಲ್ಲಿರುವ ದೈವಾಂಶ ಸಂಭೂತರೂ, ಜ್ಞಾನಿಗಳೂ ಆಗಿರುವ ಗುರುಗಳನ್ನು ಹಾಗೂ ದೇವರಿಗೆ ಶರಣಾಗಲೇಬೇಕು. ನಮ್ಮ ದೇವಾಲಯಗಳಲ್ಲಿ ಸಮಾಜಭಾಂದವರು ಸಾಮೂಹಿಕ ಪ್ರಾರ್ಥನೆಯಿಂದ ಗುರುಪರಂಪರೆಯ ಸ್ಮರಣೆ ನಿತ್ಯವೂ ಸ್ಮರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದರಿಂದ ದೇವರ ಅನುಗ್ರಹಕ್ಕೆ ನಾವು ಪಾತ್ರರಾಗಿ ಜೀವನ ಸಾರ್ಥಕಗೊಳಿಸಿಕೊಳ್ಳಲು ಸಾಧ್ಯ ಎಂದರು.

ಪ್ರಧಾನ ಅರ್ಚಕ ಹರೀಶ ಭಟ್ ನೇತೃತ್ವದಲ್ಲಿ ಸಮಾಜದ ಮಹಿಳೆಯರಿಂದ ದೇವಿ ಪಾರಾಯಣ ಪಠಣ, ಸಂಕೀರ್ತನೆ, ಪುರುಷರಿಂದ ಸಾಮೂಹಿಕ ಗಾಯತ್ರಿಮಂತ್ರ ಹಾಗೂ ಗುರುಪರಂಪರಾ ಸ್ತೋತ್ರ ಪಠಣ ಮತ್ತು ಗುರುಗಳ ಪಲ್ಲಕ್ಕಿ ಉತ್ಸವ ನಡೆಯಿತು. ಪುರೋಹಿತ ವರ್ಗದವರಾದ ಉದಯ್ ಭಟ್, ಪ್ರಮೋದ ಭಟ್, ವಿನಾಯಕ ಭಟ್, ಹರಿ ಭಟ್ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕರಿಸಿದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಯು. ವಿಷ್ಣು ಪಡಿಯಾರ್, ಯು. ಸತೀಶ್ ಪಡಿಯಾರ್ ಹಾಗೂ ಸದಸ್ಯರು, ಹತ್ತು ಸಮಸ್ತರು ಮತ್ತು ಭಜಕರು ಉಪಸ್ಥಿತರಿದ್ದರು.

Call us

Call us

Leave a Reply

Your email address will not be published. Required fields are marked *

ten − seven =