ಎಂಐಟಿಕೆ: ರಾಷ್ಟ್ರಮಟ್ಟದ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಾರ್ಯಗಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ಆಶ್ರಯದಲ್ಲಿ ರಾಷ್ಟ್ರಮಟ್ಟದ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಾರ್ಯಗಾರ ನಡೆಯಿತು.

Click Here

Call us

Call us

ಹೈದ್ರಾಬಾದ್ ಐಐಟಿ ಪ್ರತಿನಿಧಿ ಸೀನಿಯರ್ ನೆಟ್‌ವರ್ಕ ಇಂಜಿನಿಯರ್ ನೀರಜ್ ಕುಮಾರ್ ಉದ್ಘಾಟಿಸಿ, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನದಿಂದ ತಂತ್ರಜ್ಞಾನದ ವಿಷಯ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದ್ದು, ಇಂಜಿನಿಯರಿಂಗ್ ಶಿಕ್ಷಣದಿಂದ ಕಷ್ಟಕರ ಎನ್ನುವ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡು ಹಿಡಿಯಲು ಸಾದ್ಯ ಎಂದು ಹೇಳಿದರು.

Click here

Click Here

Call us

Visit Now

ಕಾಲೇಜು ಪ್ರಾಂಶುಪಾಲ ಡಾ. ಮೋಹನ್ ದಾಸ್ ಭಟ್ ಅಧ್ಯಕ್ಷತೆ ವಹಸಿ, ಯಾವುದೇ ಕಾಲೇಜು ಪ್ರಗತಿ ಹೊಂದಬೇಕಾದರೆ ಚಟುವಟಿಕೆಗಳು ಪ್ರಧಾನ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಪುಸ್ತಕದಲ್ಲಿನ ವಿಷಯಗಳಿಗೆ ಮಾತ್ರ ಸೀಮಿತವಾಗಿರದೆ, ತಾಂತ್ರಿಕ ಕೇತ್ರದಲ್ಲಿನ ಎಲ್ಲಾ ವಿಷಯಗಳ ಜ್ಞಾನವನ್ನು ಪಡೆದು ಕೊಳ್ಳಬೇಕಾಗಿ ಸಲಹೆ ನೀಡಿದರು

ಮೂಡ್ಲಕಟ್ಟೆ ವಿದ್ಯಾಲಯವು ಐ.ಐ.ಟಿ ಹೈದಾಬಾದ್ ಮತ್ತು ಐ.ಐ.ಟಿ ಭುವನೇಶ್ವರ್ ನಡೆಸುವ ಕಾರ‍್ಯಗಾರದ ವಲಯ ಕೇಂದ್ರವಾಗಿ ಆಯ್ಕೆಗಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ‍್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ವೃದ್ಧಿ ಪಡಿಸುವಲ್ಲಿ,ಕಂಪ್ಯೂಟರ್ ಸೈನ್ಸ್ ವಿಭಾಗವು ಕಾರ್ಯನಿರ್ವಹಿಸುತ್ತಿದೆ ಎಂದು ವಿಭಾಗದ ಮುಖ್ಯಸ್ಥ ಮೆಲ್ವಿನ್ ಡಿಸೋಜಾ ಹೇಳಿದರು. ಕಾರ್ಯಗಾರದ ಪ್ರಧಾನ ಸಂಯೋಜಕ ಪ್ರೊ. ಶೈಲೇಶ್ ಬಿ.ಸಿ. ಉಪಸ್ಥಿತಿರಿದ್ದರು. ಪ್ರೋ. ಅರುಣ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

eleven + seven =