ಎಂಡೋಸಲ್ಫಾನ್ ಅಂಗವಿಕಲರಿಗೆ ಪುನವ೯ಸತಿ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆಗೆ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಅಂಗವಿಕಲರ ಪುನವ೯ಸತಿ ಕೇಂದ್ರ ಆರಂಭಿಸಲು ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇನಾಪುರದಲ್ಲಿ ಕಾದಿರಿಸಿದ ಐದು ಎಕ್ರೆ ಸರಕಾರಿ ಸ್ಥಳದಲ್ಲಿಎಂಡೋಸಲ್ಫಾನ್ ಅಂಗವಿಕಲರ ಪುನವ೯ಸತಿ ಕೇಂದ್ರ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಕೂಡಲೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರನ್ನು, ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಿಯೋಗ ಬೇಟಿಮಾಡಿ ಒತ್ತಾಯಿಸಿತು.

ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ(ಎನ.ಪಿ.ಆರ್.ಡಿ) ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಣಿ, ಜಿಲ್ಲಾ ಮುಖಂಡರಾದ ಬಾಬು.ಕೆ.ದೇವಾಡಿಗ ಉಪ್ಪುಂದ, ವಿಜಯ ನಾಗೂರು ಕಿರಮಂಜೆಶ್ವರ, ಕಿಶನ್ ಪ್ರಭು ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

12 + thirteen =