ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ 2016ನೇ ಸಾಲಿನ ವಲಯ ಮಟ್ಟದ ಸಮಾಜ ಸೇವಾ ಸಾಧನೆಗಾಗಿ ಸಮಾಜ ಸೇವಕ, ಪ್ರಸ್ತುತ ಎಸ್.ಡಿ.ಎಂ.ಸಿ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಎಂ.ಅಬ್ದುಲ್ ಸಲಾಂ ಚಿತ್ತೂರು ಅವರಿಗೆ ಪುತ್ತೂರಿನಲ್ಲಿ ನಡೆದ ಜೇಸಿಐ ಸಂಭ್ರಮದಲ್ಲಿ ಸಾಧನಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೇಸಿಐನಂತಹ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದಾರೆ.
ಎಂ.ಅಬ್ದುಲ್ ಸಲಾಂ ಅವರಿಗೆ ಸಾಧನಶ್ರೀ ಪ್ರಶಸ್ತಿ
