ಎಪ್ರಿಲ್ 23: ಗುರುಕುಲದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಚೆಸ್ ಪಂದ್ಯಾಟ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ನಿರಂತರ ಗುಣಮಟ್ಟದ ಶಿಕ್ಷಣ ಮತ್ತು ವಿಭಿನ್ನ ಸಮಾಜಮುಖಿ ಕಾರ‍್ಯಕ್ರಮಗಳನ್ನು ಆಯೋಜಿಸುತ್ತ ಕರಾವಳಿ ಕರ್ನಾಟಕದ ಭಾಗದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಯೆಂದು ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ನಿದರ್ಶನವೆಂಬತೆ ಕರ್ನಾಟಕ ಚದುರಂಗ ಪಂದ್ಯಾವಳಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಹೊನಲು ಬೆಳಕಿನ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಈ ಸಂಸ್ಥೆ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ. ಎಪ್ರಿಲ್ 23 ,2018 ಸೋಮವಾರದಂದು ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರಾಜ್ಯಮಟ್ಟದ ಚದುರಂಗ ಸ್ಪಧೆಯು ನಡೆಯಲಿದೆ. ಇಂದಿನ ಮಕ್ಕಳಲ್ಲಿ ಚದುರಂಗ ಆಟದ ಮಹತ್ವ ಮತ್ತು ಅದರಿಂದಾಗುವ ಗುಣಾತ್ಮಕ ಬದಲಾವಣೆಗಳ ಕುರಿತು ಜಾಗ್ರತೆ ಮೂಡಿಸುವ ಮೂಲ ಉದ್ದೇಶ ಈ ಸಂಸ್ಥೆಯದ್ದಾಗಿದೆ.

ಈ ಐತಿಹಾಸಿಕ ಚದುರಂಗ ಪಂದ್ಯಾಟವು ಗುರುಕುಲ ಪಬ್ಲಿಕ್ ಶಾಲೆಯ ಪ್ರಧಾನ ನೇತ್ರತ್ವದಲ್ಲಿ ಕಶ್ವಿ ಚೆಸ್ ಸ್ಕೂಲ್ ಕುಂದಾಪುರ , ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೆಶನ್ ಹಾಗೂ ಉಡುಪಿ ಜಿಲ್ಲೆ ಚೆಸ್ ಅಸೋಸಿಯೆಶನ್‌ರವರ ಸಹಾಕಾರದೊಂದಿಗೆ ನಡೆಯಲಿದೆ. ಈ ಪಂದ್ಯಾಟವು ವಯೋಮಿತಿ 8, 10, 12, , ಮತ್ತು 15 ರ ವರೆಗಿನ ಮಕ್ಕಳಿಗಾಗಿ ನಡೆಸಲಾಗುವುದು. ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಆಕಷಕ ಪ್ರಶಸ್ತಿ ಪತ್ರ ಹಾಗೂ ಗೆದ್ದವರಿಗೆ ಟ್ರೋಫಿ ಮತ್ತು ಮೊಬಲಗನ್ನು ಕೊಡಲಾಗುವುದು.

ಈ ಪಂದ್ಯಾಟವು ದಿನಾಂಕ 23.04.2018 ರ ಸಂಜೆ 5ಗಂಟೆಗೆ ಬಾಂಡ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ. ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಪಂದ್ಯಾಟ ಉದ್ಘಾಟನೆ ನಡೆಯಲಿದೆ ಅಲ್ಲದೆ ಉಧ್ಘಾಟಕರಾಗಿ ಅಂತರಾಷ್ಟ್ರಿಯ ಚೆಸ್ ಕೋಚ್ ಆಗಿರುವ ಡೆರಿಕ್ ಪಿಂಟೊ ಮತ್ತು ಅಂತರಾಷ್ಟ್ರೀಯ ಚೆಸ್ ಆಟಗಾರರಾದ ತೇಜಕುಮಾರ ಎಮ್.ಎಸ್ ಆಗಮಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಚಿನ್ಮಯಿ ಹಾಸ್ಪಿಟಲ್‌ನ ವ್ಯವಸ್ಥಾಪಕ, ನಿರ್ದೇಶಕರಾದ ಡಾ. ಉಮೇಶ ಪುತ್ರನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೆಶನ್‌ನ ಅಧ್ಯಕ್ಷರಾದ ಡಾ. ರಾಜ್‌ಗೋಪಾಲ್ ಶೆಣೈ ರವರು ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ, ಕರ್ನಾಟಕ ಚೆಸ್ ಅಸೋಸಿಯೆಶನ್‌ನ ಕಾರ್ಯದರ್ಶಿಗಳಾದ ಅರವಿಂದ ಶಾಸ್ತ್ರಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ನಿರೂಪಕರಾಗಿ ಆರ್‌ಜೆ ನಯನಾ ಶೆಟ್ಟಿ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಇಂತಹ ಐತಿಹಾಸಿಕ ಕಾರ‍್ಯಕ್ರಮ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿರುವುದರಿಂದ ಆಸಕ್ತರು ಈ ಕಾರ‍್ಯಕ್ರಮದಲ್ಲಿ ಪಾಲ್ಗೋಳ್ಳಬೇಕಾಗಿ ಗುರುಕುಲ ವಿದ್ಯಾ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಅನುಪಮ ಎಸ್.ಶೆಟ್ಟಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

eight − 5 =