ಎಲ್ಲಾ ವಗ೯ದ ಕಾಮಿ೯ಕರಿಗೆ ನಗದು ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಎಲ್ಲಾ ವಗ೯ದ ಕಾಮಿ೯ಕರಿಗೆ ಕೊರೋನಾ ನಗದು ಪರಿಹಾರಕ್ಕೆ ಒತ್ತಾಯಿಸಿ, ಸಿಪಿಐ(ಎಂ) ಪಕ್ಷದ ಆಶ್ರಯದಲ್ಲಿ ಪ್ರತಿಭಟನೆ  ನಡೆಯಿತು.

ಸಾವ೯ಜನಿಕ ಉಚಿತ ಲಸಿಕೆ, ಔಷಧಿಚಿಕಿತ್ಸೆಗಾಗಿ, ರೂ.10000 ನೇರ ನಗದು, ಉಚಿತ ಪಡಿತರಕ್ಕಾಗಿ, ರೈತ, ಕಾಮಿ೯ಕರ ವಿರೋಧಿ ಕಾನೂನುಗಳ ರದ್ಧತಿಗಾಗಿ, 200 ದಿನಗಳ ಉದ್ಯೋಗ ಖಾತ್ರಿಗಾಗಿ, ನಗರಗಳಿಗೂ ವಿಸ್ತರಣೆಗಾಗಿ, ಕೊರೊನಾ ಮುಂಚೂಣಿ ಕಾಯ೯ಕತ೯ರಿಗೆ ಸೂಕ್ತ ರಕ್ಷಣೆಗಾಗಿ, ಭಾದಿತ ಎಲ್ಲಾ ಕಾಮಿ೯ಕರಿಗೂ ಪೂಣ೯ ವೇತನ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು.

ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾಯ೯ದಶಿ೯ ಮಂಡಳಿ ಸದಸ್ಯ ಕೋಣಿ ವೆಂಕಟೇಶ ನಾಯಕ್ ,ನಾಗರತ್ನ ನಾಡ. ಬೈಂದೂರು ವಲಯ ಸಮಿತಿ ಮುಖಂಡ ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಚಂದ್ರ ದೇವಾಡಿಗ ಉಪ್ಪುಂದ,ಮಾಧವ ದೇವಾಡಿಗ ಉಪ್ಪುಂದ ,ನಾಗಮ್ಮ ಮಸಾಲೆಮನೆ ಯಡ್ತರೆ, ರಾಮ ಕಾಟಿಮನೆ ಪಡುವರಿ, ನಾಗೇಂದ್ರ ಯಡ್ತರೆ, ಲಕ್ಷ್ಮಣ ಯಡ್ತರೆ, ಗಣೇಶ ಮೊಗವೀರ,ರವಿ ಗಾಣಿಗ ಉಪ್ಪುಂದ, ಹರೀಶ ಬೈಂದೂರು, ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಮಚಂದ್ರ ಭಟ್ ಕಾವೇರಿ ಮಾಗ೯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

3 + 11 =