ಎಳಜಿತದ ಕೊರತಿಕಲ್ಲು ಗುಡ್ಡ ಮತ್ತು ಗುಳ್ಳಾಡಿ ಜಲಪಾತ

ಬೈಂದೂರಿನಿಂದ 10 ಕಿ.ಮೀ ದೂರದಲ್ಲಿರುವ ಎಳಜಿತಕ್ಕೆ ತೆರಳಿ ಅಲ್ಲಿಂದ ಕಿರಿದಾದ ಅಡ್ಡ ರಸ್ತೆಗಳಲ್ಲಿ ಒಂದು ಕಿ.ಮೀ ಕ್ರಮಿಸಿದರೆ ಗುಳ್ಳಾಡಿ ಹಾಗೂ ಎರಡು ಕಿ,ಮಿ ಕ್ರಮಿಸಿದರೆ ಮಂದಣಕಲ್ಲು ಜಲಪಾದ ಎದುರುಗೊಳ್ಳುತ್ತದೆ. ಅದ್ಬುತವಾದ ಸೌಂದರ್ಯದಿಂದ ಕಂಗೋಳಿಸುವ ಈ ಕಿರು ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ.

ಇಲ್ಲಿನ ಕೊರತಿಕಲ್ಲು ಗುಡ್ಡ ಚಾರಣಪ್ರೀಯರಿಗೆ ಹೇಳಿ ಮಾಡಿಸಿದಂತಿದೆ. ಎಳಜಿತ ಪೇಟೆಯಿಂದ ಸುಮಾರು ನಾಲ್ಲು ಗಂಟೆ ಹಾದಿ ಕ್ರಮಿಸಿದರೆ ಈ ಬೆಟ್ಟವನ್ನು ಏರಬಹುದಾಗಿದೆ. ಇಲ್ಲಿನ ಜಲಪಾತ ಹಾಗೂ ಬೆಟ್ಟಕ್ಕೆ ತೆರಳುವ ಮೊದಲು ಸ್ಥಳಿಯರಲ್ಲಿ ಸೂಕ್ತ ಮಾಹಿತಿ ಪಡೆದು ಹೋಗುವುದು ಉತ್ತಮ. ಬೈಂದೂರು ಭಾಗದಲ್ಲಿ ಹತ್ತಾರು ಸಣ್ಣಪುಟ್ಟ ತೊರೆಗಳು, ಜಲಪಾತಗಳು, ಬೆಟ್ಟಗುಡ್ಡಗಳು ಕಾಣಸಿಗುತ್ತವೆ.

Leave a Reply

Your email address will not be published. Required fields are marked *

19 + 19 =