ಎಳಜಿತ ಸಾಂತೇರಿ ಮಾರ್ಗದ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಆಗ್ರಹ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಎಳಜಿತ್ ಗ್ರಾಮದ ಸಾಂತೇರಿಗೆ ಹೋಗುವ ಮಾರ್ಗದ ಹೊಳೆಗೆ ಸಂಪರ್ಕ ಸೇತುವೆ ನಿರ್ಮಿಸಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿದ್ದು, ಜನಪ್ರತಿನಿಧಿಗಳು ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಇಂದು ಹೀಗೆಯೇ ಮುಂದುವರಿದರೆ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Call us

Call us

Click Here

Visit Now

ಈ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ, ಜೆಡಿಎಸ್ ಪ್ರಮುಖ ರವಿ ಶೆಟ್ಟಿ ಅವರ ಗಮನಕ್ಕೆ ತಂದಿದ್ದು, ಅವರ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಒಂದು ವಾರದೊಳಕ್ಕೆ ಬಗೆಹರಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಭಾಗದ ಜನಕ್ಕೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

Click here

Click Here

Call us

Call us

ಈ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ ಮತ್ತು ಉಪ್ಪುಂದ ಘಟಕದ ಕೆ. ರವಿಚಂದ್ರ, ರಾಜೇಶ್ ಕಿಣಿ, ಗಜೇಂದ್ರ ಗೌಡ. ವಿಜೇಂದ್ರ ಶೆಟ್ಟಿ, ರಾಮು, ರಾಘವೇಂದ್ರ ಸುಬ್ರಮಣ್ಯ, ಚಂದ್ರು, ಪ್ರಭಾಕರ್ ಗೌಡ, ಸುಂದರ್ ಇನ್ನಿತರರು ಉಪಸ್ಥಿತರಿದ್ದರು

 

Leave a Reply

Your email address will not be published. Required fields are marked *

18 + eighteen =