ಎಸ್ಸೆಸ್ಸೆಲ್ಸಿ: ಆಳ್ವಾಸ್‍ನ ಆಕಾಶ್, ದೀಕ್ಷಾ ರಾಜ್ಯಕ್ಕೆ ತೃತೀಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ್ ಎಂ. ನಾಯರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಅನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರು ಯಲಹಂಕ ನ್ಯೂಟೌನ್‍ನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಮಂಜುನಾಥ ಎನ್. ನಾಯರಿ ಹಾಗೂ ಗೀತಾ ಎಂ. ದಂಪತಿಯ ಪುತ್ರ ಆಕಾಶ್ ಎಂ. ನಾಯರಿ ಸಾಧನೆ ಮಾಡಿದ ವಿದ್ಯಾರ್ಥಿ. ಈತ ಗಣಿತ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜದಲ್ಲಿ ನೂರಕ್ಕೆ 100, ಕನ್ನಡದಲ್ಲಿ ನೂರಕ್ಕೆ 99, ಹಾಗೂ ಪ್ರಥಮ ಭಾಷೆ ಸಂಸ್ಕøತದಲ್ಲಿ 125ಕ್ಕೆ 124 ಅಂಕಗಳನ್ನು ಆಕಾಶ್ ಎಂ. ನಾಯರಿ ಪಡೆದಿದ್ದಾರೆ.

ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿರಂತರ ನಿಗಾ ಆಳ್ವಾಸ್‍ನಲ್ಲಿ ದೊರಕಿದ್ದರಿಂದ ಗರಿಷ್ಠ ಅಂಕ ಸಾಧನೆ ಸಾಧ್ಯವಾಯಿತು. ವಿದ್ಯಾರ್ಥಿಗಳು ಶಿಕ್ಷಕರ ಮಾತನ್ನು ಚಾಚೂತಪ್ಪದೇ ಪಾಲಿಸಿದಲ್ಲಿ ಯಶಸ್ಸು ಪಡೆಯಬಹುದು. ಶಿಕ್ಷಕರ ಮಾತು ನಮ್ಮ ಒಳ್ಳೆಯದಕ್ಕೆಂದು ಭಾವಿಸಿದರೆ ಅದರ ಫಲ ನಮಗೆ ದೊರಕುತ್ತದೆ ಎಂದು ಆಕಾಶ್ ಎಂ. ನಾಯರಿ ಪತ್ರಿಕೆ ಜೊತೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಆಳ್ವಾಸ್‍ನ ದೀಕ್ಷಾ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ತೃತೀಯ
ಆಳ್ವಾಸ್ ಆಂಗ್ಲಮಾಧ್ಯಮ ಶಾಲೆಯ ದೀಕ್ಷಾ ಎಂ.ಎನ್ 623 ಅಂಕಗಳನ್ನು ಪಡೆಯುವುದರ ಮೂಲಕ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾಳೆ.

ಚಾಮರಾಜ ನಗರ ಜಿಲ್ಲೆಯ ಯಲಂದೂರು-ಮದೂರಿನ ನಿವಾಸಿ, ಐಟಿಐ ಕಾಲೇಜಿನ ಉಪನ್ಯಾಸಕ ನಂದೀಶ್ ಮೂರ್ತಿ-ಗೃಹಿಣಿ ಮಂಜುಳಾ ಬಿ.ಎಸ್ ದಂಪತಿಯ ದೀಕ್ಷಾ, ಆಳ್ವಾಸ್ ಉಚಿತ ಶಿಕ್ಷಣ ಯೋಜನೆಯಡಿ ಶಿಕ್ಷಣ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿ, ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ ವಿಷಯದಲ್ಲಿ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಹೆತ್ತವರ, ಶಿಕ್ಷಕರ, ಗೆಳೆಯರ ಪ್ರೋತ್ಸಾಹ, ಡಾ.ಎಂ ಮೋಹನ ಆಳ್ವ ಅವರ ಮುತುವರ್ಜಿಯಲ್ಲಿ ಆಳ್ವಾಸ್ ಶಾಲೆಯಲ್ಲಿ ಅಚ್ಚುಕಟ್ಟಾದ ಶೈಕ್ಷಣಿಕ ವ್ಯವಸ್ಥೆ ಸಾಧನೆಗೆ ಪೂರಕವಾದ ವಾತಾವರಣ ಕಲ್ಪಿಸಿದೆ. ದಿನದ ನಾಲ್ಕು ಗಂಟೆಯ ವ್ಯವಸ್ಥಿತ ಅಧ್ಯಯನದ ಫಲ ಉತ್ತಮ ಅಂಕ ಎಂದು ದೀಕ್ಷಾ ಸಂತಸವನ್ನು ಹಂಚಿಕೊಳ್ಳುತ್ತಾರೆ.

ಎಸ್‍ಎಸ್‍ಎಲ್‍ಸಿಯಲ್ಲಿ ಗಣಿತಾ ಹಾಗೂ ಇಂಗ್ಲೀಷ್‍ನಲ್ಲಿ 99, ಉಳಿದ ಎಲ್ಲ ಮೂರು ವಿಷಯಗಳಲ್ಲಿ ನೂರಕ್ಕೆ ನೂರು, ಕನ್ನಡದಲ್ಲಿ 125 ಅಂಕಗಳನ್ನು ದೀಕ್ಷಾ ಪಡೆದಿದ್ದಾರೆ.

Leave a Reply

Your email address will not be published. Required fields are marked *

3 + twenty =