ಎಸ್‌ಕೆಪಿಎ ಕುಂದಾಪುರ ವಲಯದ ಸದಸ್ಯತ್ವ ನವೀಕರಣ ಸಭೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ (ಎಸ್‌ಕೆಪಿಎ) ಕುಂದಾಪುರ ವಲಯದ ಸದಸ್ಯತ್ವ ನವೀಕರಣ ಸಭೆ ಇತ್ತಿಚಿಗೆ ಅಕ್ಷತಾ ಸಭಾಂಗಣದಲ್ಲಿ ನಡೆಯಿತು.

Call us

ದ.ಕ. – ಉಡುಪಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕೊರೊನಾ ಮಹಾಮಾರಿಯಿಂದ ಪ್ರಪಚಂದ ಎಲ್ಲಾ ವರ್ಗದ ಜನರು ಸಮಸ್ಯೆಗೆ ಒಳಗಾಗಿದ್ದು ನಮ್ಮ ಛಾಯಾಗ್ರಾಹಕರು ಇದಕ್ಕೆ ಎದೆಗುಂದದೆ ಕೊರೊನಾ ಸಮಸ್ಯೆಯನ್ನು ಎದುರಿಸಿ ಉತ್ತಮ ಜೀವನ ಶೈಲಿಯನ್ನು ರೂಪಿಸೊಕೊಳ್ಳುವ ಮೂಲಕ ಒಳ್ಳೆಯ ಬದುಕನ್ನು ನಡೆಸಬೇಕೆಂದು ಹೇಳಿದರು.

ಎಸ್‌ಕೆಪಿಎ ಕುಂದಾಪುರ ವಲಯದ ಅಧ್ಯಕ್ಷರಾದ ರಾಜ ಮಠದಬೆಟ್ಟು ಸಭೆಯ ಅಧ್ಯಕ್ಷತೆ ವಹಿಸಿದರು. ಎಸ್‌ಕೆಪಿಎ ಕುಂದಾಪುರ ವಲಯದ ಉಪಾಧ್ಯಕ್ಷರಾದ ನಾಗರಾಜ ರಾಯಪ್ಪನಮಠ, ಕಾರ್ಯದರ್ಶಿ ಹರೀಶ್ ಅಡ್ಯಾರು, ಜೊತೆ ಕಾರ್ಯದರ್ಶಿ ಸಂತೋಷ ಕಾಪು, ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಬ್ರಹ್ಮಾವರ, ಕುಂದಾಪುರ ವಎಸ್‌ಕೆಪಿಎ ಕುಂದಾಪುರ ವಲಯದ ಸಲಹಾ ಸಂಚಾಲಕರಾದ ಗಿರೀಶ್ ಜಿ. ಕೆ, ಪ್ರಧಾನ ಕಾರ್ಯದರ್ಶಿ ಅಮೃತ್ ಬೀಜಾಡಿ, ಉಪಾಧ್ಯಕ್ಷರುಗಳಾದ ಪ್ರಕಾಶ್ ಕುಂದೇಶ್ವರ, ಸುರೇಶ್ ಜಮದಗ್ನಿ, ಚಂದ್ರಶೇಖರ್ ನಾಯ್ಕನಕಟ್ಟೆ, ಬಾಲಕೃಷ್ಣ ಶೆಟ್ಟಿ ಇಡೂರು, ಕೋಶಾಧಿಕಾರಿ ಗೋಪಾಲ ಕಾಂಚನ್ ಉಪಸ್ಥಿತರಿದ್ದರು. ಸುರೇಶ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

2 × one =