ಎಸ್‍ಎಸ್‍ಎಲ್‍ಸಿ ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಗೆ ಶೇ.98.66

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಅತ್ಯುನ್ನತ ಸಾಧನೆ ಮಾಡಿದೆ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಒಟ್ಟು 903 ಮಂದಿ ಪರೀಕ್ಷೆ ಬರೆದಿದ್ದು 885 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 98.66 ಫಲಿತಾಂಶವನ್ನು ಪಡೆದುಕೊಂಡಿದೆ.

ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಲಾ ಪ್ರಶಾಂತ್ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಮತ್ತು ಜಿಲ್ಲೆಗೆ ಪ್ರಥಮಸ್ಥಾನವನ್ನು ಹಾಗೂ ಲಾವಣ್ಯ ಶಹಾಪುರ 622 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅವಿಭಜಿತ ಜಿಲ್ಲೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸುಧನ್ವ ನಾಡಿಗೇರ 619 ಪ್ರಥಮ ಸ್ಥಾನ, ಶಶಾಂಕ 618 ದ್ವಿತೀಯ ಸ್ಥಾನ, ಸಂತೋಷ 617 ತೃತೀಯ ಸ್ಥಾನ ಹಾಗೂ ಪ್ರದೀಪ್ ರಾಮಪ್ಪ ದೇಸಾಯಿ 616 ಅಂಕ ಗಳಿಸಿ ಚತುರ್ಥಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆಳ್ವಾಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಒಟ್ಟು ಫಲಿತಾಂಶದಲ್ಲಿ 600 ಅಂಕಕ್ಕಿಂತ ಮೇಲ್ಪಟ್ಟು 46 ವಿದ್ಯಾರ್ಥಿಗಳು, 95%ಕ್ಕಿಂತ ಮೇಲ್ಪಟ್ಟು 62 ವಿದ್ಯಾರ್ಥಿಗಳು, 90%ಕ್ಕಿಂತ ಮೇಲ್ಪಟ್ಟು 180 ವಿದ್ಯಾರ್ಥಿಗಳು ಮತ್ತು 85 %ಕ್ಕಿಂತ ಮೇಲ್ಪಟ್ಟು 353 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *

four × 2 =