ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ರಾಮ ವಿವಿದೋದ್ಧೇಶ ಟ್ರಸ್ಟ್ ಹಾಗೂ ವಿದ್ಯಾಂಗ ಉಪನಿರ್ದೇಶಕರ ಕಚೇರಿ ಉಡುಪಿಯ ಸಹಯೋಗದೊಂದಿಗೆ ಯಡ್ತರೆ ಜೆ.ಎನ್. ಆರ್. ಸಭಾಭವನದಲ್ಲಿ ಒಂದು ದಿನದ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿತ್ತು.
ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್ ಬೈಂದೂರಿನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರೆಗಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದು ಫಲಿತಾಂಶವನ್ನು ಹೆಚ್ಚಿಸಬೇಕೆಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ ರವರುವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಪುಷ್ಪರಾಜ ಶೆಟ್ಟಿ, ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್ನ ವಿಶ್ವಸ್ಥರಾದ ಶ್ರೀ ವೆಂಕಟ್ರಮಣ ಬಿಜೂರು ಶ್ರೀನಿವಾಸ ಬಿಜೂರು, ವಿಶ್ವೇಶ್ವರ ಎನ್. ಶ್ರೀನಿವಾಸ ಮದ್ದೋಡಿಯವರು ಉಪಸ್ಥಿತರಿದ್ದರು. ವಿಷಯ ಪರಿವೀಕ್ಷಣಾಧಿಕಾರಿಗಳಾದ ನಾಗರಾಜರವರು ಸ್ವಾಗತಿಸಿದರು, ಟ್ರಸ್ಟ್ ನ ಸಂಚಾಲಕ ಶಿಕ್ಷಕ ಆನಂದ ಮದ್ದೋಡಿಯವರು ಪ್ರಸ್ತಾವನೆಗೈದರು.
ಜಿಲ್ಲಾ ಅಕ್ಷರದಾಸೋಹದ ಸಹಾಯಕ ಅಧಿಕಾರಿ ಚಂದ್ರ ನಾಯ್ಕ ರವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದ್ದರು. ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜು ಕಾಳಾವರ್ ರವರು ಧನ್ಯವಾದಗೈದರು.
ಕೊಲ್ಲೂರಿನಲ್ಲಿಯೂ ಚಾಲನೆ
ಇದೇ ಸಂದರ್ಭದಲ್ಲಿ ಇನ್ನೊಂದು ಕೇಂದ್ರವಾದ ಕೋಲ್ಲೂರಿನಲ್ಲಿ ಅಕ್ಷರದಾಸೋಹದ ಮುಖ್ಯ ಅಧಿಕಾರಿ ನಾಗರಾಜ ಹಾಗೂ ಸಮಾಜ ವಿಜ್ಞಾನ ವಿಷಯಪರಿವೀಕ್ಷಣಾಧಿಕಾರಿ ವೆಂಕಟೇಶ ನಾಯಕ್ ಮಾರ್ಗದರ್ಶನದಲ್ಲಿ ಶಿಬಿರವು ಉದ್ಘಾಟನೆಗೊಂಡಿತು. ಸಮಾರಂಭದ ವೇದಿಕೆಯಲ್ಲಿ ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್ ಬೈಂದೂರಿನ ಟ್ರಸ್ಟಿಗಳಾದ ನಾಗಪ್ಪ ಶೇರೆಗಾರ ಗುಡೇಮನೆ ಮತ್ತು ಸೂಧಾಕರ ಹೊಸಾಡು ಉಪಸ್ಥಿತರಿದ್ದರು. ಟ್ರಸ್ಟ್ನ ಸಂಚಾಲಕರಾದ ಶಿಕ್ಷಕ ಕೇಶವ ನಾಯಕ್ ಬಿಜೂರು ಪ್ರಸ್ಥಾವಿಸಿದರು. ಕಾರ್ಯಕ್ರಮದ ಸಂಘಟನೆಯನ್ನು ಮುಖ್ಯೋಪಾಧ್ಯಾಯರುಗಳಾದ ನಾಗರಾಜ ಭಟ್ ಮತ್ತು ಶಿವರಾಮ ಭಟ್ ನೆರವೇರಿಸಿದರು. ಎರಡು ಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕ್ಯಾಪ್ಟನ್ ಆನಂದ ಹಾಗೂ ಜಿಲ್ಲಾ ಉದ್ಯೋಗಾಧಿಕಾರಿ ಬಸವರಾಜ ಉತ್ತಮ ಮಾಹಿತಿಗಳನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.