ಎಸ್. ಜನಾರ್ದನ ಅವರಿಗೆ 2019ರ ಸದಾನಂದ ಪ್ರಶಸ್ತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ ತಜ್ನ, ರಾಷ್ಟೀಯ ಶಿಕ್ಷಕ ಪ್ರಸ್ತಿ ಪುರಸ್ಕೃತ, ಯಕ್ಷಗಾನ ಸವ್ಯಸಾಚಿ, ಯಕ್ಷಗಾನ ಕಲಾಕೇಂದ್ರ ಸಂಸ್ಥಾಪಕ ದಿವಂಗತ ಐರೋಡಿ ಸದಾನಂದ ಹೆಬ್ಬಾರರ ಪುಣ್ಯ ಸ್ಮರಣಾರ್ತ ಕಲಾಕೇಂದ್ರವು ಅವರ ಹೆಸರಿನಲ್ಲಿ ಪ್ರತೀ ವರ್ಷವೂ ಸದಾನಂದ ಪ್ರಶಸ್ಥಿಯನ್ನು ನೀಡುತ್ತಾ ಬಂದಿದ್ದು ಶಿಕ್ಷಣ, ಸಮುದಾಯಾಭಿವೃದ್ದಿ, ಸ್ಥಳಿಯಾಡಳಿತ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ನಿವೃತ್ತ ಉಪನ್ಯಾಸಕರಾದ ಮರವಂತೆಯ ಎಸ್ ಜನಾರ್ದನ ಇವರನ್ನು 2019 ರ ಸದಾನಂದ ಶಶಸ್ಥಿಗೆ ಆಯ್ಕೆ ಮಾಡಲಾಗಿದೆ.

Call us

Call us

Visit Now

ಬೈಂದೂರು ವಲಯದ ಪತ್ರಕರ್ತ ಸಂಘದ ಅಧ್ಯಕ್ಷರಾಗಿರುವ ಮರವಂತೆ ಜನಾರ್ದನರವರು ರಾಜ್ಯದ ಪಂಚಾಯತ್‌ರಾಜ್ ವಿಷಯದಲ್ಲಿ ಪರಿಣತಲ್ಲೊಬ್ಬರು. ದೇಶದ ಯೋಜನಾ ಆಯೋಗ ನಡೆಸಿದ ವಿವಿಧ ಅಧ್ಯಯನ, ಬೋಧನೆ, ತರಬೇತಿ ಮತ್ತು ಸಂವಹನ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತಿದಾರರಾಗಿ ಪಠ್ಯಕ್ರಮ ಮತ್ತು ಪಠ್ಯ ಸಿದ್ದತೆಯಲ್ಲಿ ದುಡಿದಿದ್ದಾರೆ. ಮರವಂತೆಯ ಪಂಚಾಯತ್ನ ಅಧ್ಯಕ್ಷರಾಗಿ,ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆಯ ಸ್ಥಾಪಕರಾಗಿ ಊರಿನ ಆರೋಗ್ಯ, ಶೈಕ್ಷಣಿಕ, ಸಾಮಾಜಿಕ, ಸಾಸ್ಕೃತಿಕ ಅಭಿವೃದ್ದಿಯ ಹರಿಕಾರರಾಗಿದ್ದಾರೆ.

Click here

Call us

Call us

ಈ ವರ್ಷದ ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭವು ನ. 16ರಂದು ಶನಿವಾರ ಸಂಜೆ ಗಂಟೆ 6 ಕ್ಕೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

twelve − eight =