ಎ.19ರಂದು ನಾಗೂರಿನಲ್ಲಿ ಬಿಲ್ಲವ ವಧು-ವರ ಅನ್ವೇಷಣೆ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ರಿ. ನೇತೃತ್ವದಲ್ಲಿ ಬೈಂದೂರು ತಾಲೂಕು ಬಿಲ್ಲವರ ಸಂಘದ ಸಹಯೋಗದೊಂದಿಗೆ ಎ.19ರ ಭಾನುವಾರ ನಾಗೂರಿನ ಸಾಗರ ಸಭಾ ಭವನದಲ್ಲಿ ವಧು-ವರ ಅನ್ವೇಷಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Click Here

Call us

Call us

Click here

Click Here

Call us

Visit Now

ಸೋಮವಾರ ಬೈಂದೂರು ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ. ವೇದಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿವಾರ ವಧುವರ ಅನ್ವೆಷಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ದೂರದ ಊರುಗಳಿಂದ ಬರುವ ವಧು-ವರರು ಮತ್ತು ಅವರ ಹೆತ್ತವರಿಗೆ ತಂಗಲು ಸರಿಯಾದ ವ್ಯವಸ್ಥೆಯಿಲ್ಲದೆ ಆಗುತ್ತಿರುವ ಅನಾನುಕೂಲ ಹಾಗೂ ಆರ್ಥಿಕ ತೊಂದರೆಯನ್ನು ಗಮನಿಸಿ ಮಂಗಳೂರು, ಕಾಸರಗೋಡು, ಶಿವಮೊಗ್ಗ, ಉಡುಪಿ, ಕುಂದಾಪುರ ಮೊದಲಾದೆಡೆ ಪ್ರತ್ಯೇಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮೊದಲ ಭಾರಿಗೆ ಬೈಂದೂರು ತಾಲೂಕಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರಳ ಮದುವೆ, ದುಂದುವೆಚ್ಚ ಕಡಿತ, ವಧು-ವರರಲ್ಲಿ ಸಮನ್ವಯತೆಯ ಕೊರತೆ ನಿವಾರಿಸುವುದು ಮೊದಲಾದ ಸದುದ್ದೇಶಗಳೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಬಿಲ್ಲವ ಸಮಾಜದ ವಧು ವರರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ನ ಉಪಾಧ್ಯಕ್ಷ ಉದಯಕುಮಾರ್, ಸಂಘಟನಾ ಕಾರ್ಯದರ್ಶಿ ನಾರಾಯಣ ಪೂಜಾರಿ, ಬೈಂದೂರು ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷ ಗಣೇಶ್ ಎಲ್. ಪೂಜಾರಿ, ಕಾರ್ಯದರ್ಶಿ ವಾಸುದೇವ ಪೂಜಾರಿ, ಪ್ರಮುಖರಾದ ಮೋಹನ ಪೂಜಾರಿ, ದೊಟ್ಟಯ್ಯ ಪೂಜಾರಿ, ಗಣೇಶ್ ಪೂಜಾರಿ, ಉದಯ ಪೂಜಾರಿ ಮೊದಲಾದವರು ಇದ್ದರು.

Call us

ಬಿಲ್ಲವ ವಧು-ವರ ಅನ್ವೇಷಣೆ:
ಆಸಕ್ತರು ನಿಗದಿತ ಅರ್ಜಿ ನಮೂನೆಗಳನ್ನು ಬೈಂದೂರು ತಾಲೂಕು ಬಿಲ್ಲವ ಸಂಘದಿಂದ ಉಚಿತವಾಗಿ ಪಡೆದು ದಿನಾಂಕ 05.04.2020ರ ಒಳಗೆ ಸಂಘದ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಕೋರಲಾಗಿದೆ. ಬೆಂಗಳೂರು ಕಛೇರಿಯಲ್ಲಿ ನೋಂದಾಯಿಸಿದವರು ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ.

ಎ.19ರಂದು ನಾಗೂರಿನಲ್ಲಿ ನಡೆಯಲಿರುವ ಬಿಲ್ಲವ ವಧು ವರ ಅನ್ವೇಷಣೆ ಕಾರ್ಯಕ್ರಮದ ಸಂಚಾಲಕರಾಗಿ ಬೈಂದೂರು ತಾಲೂಕು ಬಿಲ್ಲವರ ಸಂಘದ ಉಪಾಧ್ಯಕ್ಷರಾದ ಶೇಖರ ಪೂಜಾರಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಂತಿ ವಿಜಯಕೃಷ್ಣ ಪಡುಕೋಣೆ ಕಾರ್ಯನಿರ್ವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಚಾಲಕರಾದ ಶೇಖರ್ ಪೂಜಾರಿ, ಹೊಸ್ಕೋಟೆ -9964785699 ಜಯಂತಿ ವಿಜಯಕೃಷ್ಣ -9743596455 ಅವರನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

3 × five =