ಎ.21ಕ್ಕೆ ಉಪ್ರಳ್ಳಿಯ ನವೀಕೃತ ಶಿಲಾಮಯ ಜನಾರ್ದನ ದೇವಸ್ಥಾನ ಬ್ರಹ್ಮಕಲಶಾಭಿಷೇಕ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ 11ನೆ ಉಳ್ಳೂರು ಗ್ರಾಮದ ಉಪ್ರಳ್ಳಿಯ ಜನಾರ್ದನ ದೇವಸ್ಥಾನವು ಸುಮಾರು 1300ವರ್ಷಗಳ ಹಿಂದಿನದೆಂದು ನಂಬಲಾಗುತ್ತಿದೆ. ಇದು ಮುಜರಾಯಿ ಇಲಾಖೆಯ ತಸದೀಕು ಪಡೆಯುತ್ತಿದೆ. ಪಾಣಿಪೀಠದ ಮೇಲೆ ನಿಂತ ಭಂಗಿಯಲ್ಲಿ ಪ್ರತಿಷ್ಠಾಪಿತವಾಗಿರುವ ಸಾಲಿಗ್ರಾಮ ಶಿಲೆಯ ಜನಾರ್ದನ ದೇವರ ವಿಗ್ರಹವು 3 ಅಡಿ ಎತ್ತರವಾಗಿದ್ದು, ತುಂಬ ಸುಂದರವಾಗಿದೆ. ಗರ್ಭಗುಡಿ, ಗೋಪುರ, ತೀರ್ಥಮಂಟಪ, ಹೆಬ್ಬಾಗಿಲು, ಸುತ್ತ ಪೌಳಿ, ಬಲಿಕಲ್ಲುಗಳನ್ನು ಹೊಂದಿರುವ ಈ ದೇವಾಲಯ ಒಂದು ಕಾಲದಲ್ಲಿ ಊರಿನ ಪ್ರಮುಖ ದೇವಾಲಯವಾಗಿತ್ತು. ಜೀರ್ಣಗೊಂಡ ದೇವಾಲಯವನ್ನು ಶಿಲಾಮಯವಾಗಿ ಮರುನಿರ್ಮಿಸುವ ಕಾರ್ಯ ಇದೀಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎ. 19ರಿಂದ 21ರ ವರೆಗೆ ನಡೆಯುವ ಸಮಾರಂಭದಲ್ಲಿ ಅದನ್ನು ದೇವರಿಗೆ ಸಮರ್ಪಿಸಲಾಗುವುದು. 19ರಂದು ಪ್ರತಿಷ್ಠಾಪೂರ್ವ ವಿಧಿಗಳು ನಡೆದು, ೨೦ರಂದು ದೇವರ ಪುನರ್‌ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶ ಸ್ಥಾಪನೆ ನಡೆಯುವುದು. 21ರಂದು ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯುವುದು. ಅದರ ಪೂರ್ವದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಬಿ. ಅಪ್ಪಣ್ಣ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಡಾ. ಪಾದೆಕಲ್ಲು ವಿಷ್ಣು ಭಟ್, ಎಚ್. ರಾಮಚಂದ್ರ ಭಟ್, ಯು. ಚಂದ್ರಶೇಖರ ಹೊಳ್ಳ, ಬಿ. ಎಂ. ಸುಕುಮಾರ ಶೆಟ್ಟಿ, ಇತರರು ಪಾಲ್ಗೊಳ್ಳುವರು. ರಾತ್ರಿ ಸಾಲಿಗ್ರಾಮ ಮೇಳದ ಯಕ್ಷಗಾನ ಬಯಲಾಟ ನಡೆಯುವುದು ಎಂದು ಆಡಳಿತ ಮೊಕ್ತೇಸರ ಯು. ಶ್ರೀಪಾದ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು. ಮಂಜುನಾಥ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಸತೀಶಕುಮಾರ ಶೆಟ್ಟಿ ತಿಳಿಸಿದ್ದಾರೆ.

Call us

Leave a Reply

Your email address will not be published. Required fields are marked *

4 × 5 =