ಎ.25: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಕಲಚೇತನರ ಸಮಾವೇಶ, ಪ್ರತಿಭಾ ಹಾಗೂ ಕೌಶಲ್ಯ ಅನಾವರಣ

Click Here

Call us

Call us

ಕುಂದಾಪ್ರ ಡಾಟ್ ಕಾಂ ನೋಟ್.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎ.25ರಂದು ವಿಕಲಚೇತನರ ಸಮಾವೇಶ, ಪ್ರತಿಭಾ ಹಾಗೂ ಕೌಶಲ್ಯ ಅನಾವರಣದ ಕುರಿತು ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

Call us

Call us

Visit Now

ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಲಾಂಚನ, ಅಮಂತ್ರಣ ಪತ್ರಿಕೆ ಹಾಗೂ ಸರಕಾರದ ಸೌಲಭ್ಯಗಳ ಮಾಹಿತಿಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.

Click Here

Click here

Click Here

Call us

Call us

ವಿಕಲಚೇತನರ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು, ಅವರಲ್ಲಿರುವ ಸುಪ್ತ ಪ್ರತಿಭೆ ಮತ್ತು ಕೌಶಲವನ್ನು ಗುರುತಿಸಿ ಪ್ರೋತ್ಸಾಹಿಸಲು ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವುದು ಕಾರ್ಯಕ್ರಮ ಆಯೋಜನೆಯ ಉದ್ದೇಶ. ವಿಕಲಚೇತನರ ಪ್ರತಿಭಾ ಪ್ರದರ್ಶನ ಮತ್ತು ಅವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾರ್ಯಕ್ರಮವನ್ನು ಯುವ ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾದಿಕಾರಿಗಳಾದ ಹೆಚ್ ಶಾಂತಾರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಪಾಂಡುರಂಗ ಶಾನುಭೋಗ ಮಾಡಲಿದ್ದಾರೆ. ಅತಿಥಿಗಳಾಗಿ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಅಣ್ಣಾಮಲೈ, ಪುರಸಭಾ ಅಧ್ಯಕ್ಷರಾದ ವಸಂತಿ ಸಾರಂಗ,ಸುರೇಶ್ ಡಿ ಪಡುಕೋಣೆ, ಉಡುಪಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಯಾದ ನಿರಂಜನ್ ಭಟ್, ಕುಂದಾಪುರ ಜನಪರ ಪ್ರಗತಿಪರ ವೇದಿಕೆಯ ಸಂಚಾಲಕರಾದ ಮಾಣಿಗೋಪಾಲ ಆಗಮಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ

ಪ್ರೊ ರಾಮಚಂದ್ರ ಮಾಹಿತಿ ನೀಡಿ ಕಾರ್ಯಕ್ರಮದಲ್ಲಿ ಎರಡು ವಿಶೇಷ ಅಧಿವೇಶನ ನಡೆಯಲಿದ್ದು, ಮೊದಲನೆಯ ಕಾರ್ಯಗಾರದಲ್ಲಿ ವಿಕಲಚೇತನ ಹಾಗೂ ಪೋಷಕರ ಸವಾಲು-ಜವಾಬ್ದಾರಿಯ ಬಗ್ಗೆ ಡಾ. ವಿರೂಪಾಕ್ಷ ದೇವರಮನೆ ಹಾಗೂ ಎರಡನೇ ಕಾರ್ಯಗಾರದಲ್ಲಿ ವಿಕಲಚೇತನರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನಿರಂಜನ್ ಭಟ್ ಅವರು ನೀಡಲಿದ್ದಾರೆ. ಅಲ್ಲದೇ ಸ್ಥಳೀಯವಾಗಿ ಸಾಧನೆ ಮಾಡಿದ ವಿಕಲಚೇತನರಿಗೆ ಹಾಗೂ ಸಂಘ ಸಂಸ್ಥೆಯ ಸಂಚಾಲಕರಿಗೆ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಇರಲಿದೆ. ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿಕಲಚೇತನರು ಹಾಗೂ ಸಂಘ ಸಂಸ್ಥೆಗಳು ಪಾಲ್ಗೋಳ್ಳಲಿದ್ದಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರೊ. ಗೋಪಾಲ್ ಪ್ರೊ. ಸುರೇಂದ್ರನಾಥ ಶೆಟ್ಟಿ, ಪ್ರೊ. ಶುಭಕರಾಚಾರಿ, ಪ್ರೊ. ಮಹಮದ್ ಇಕ್ಬಾಲ್, ಸುಮಲತಾ ಎಸ್ ನಾಯಕ್ ಇದ್ದರು.

Leave a Reply

Your email address will not be published. Required fields are marked *

5 − 3 =