ಎ21: ಮಂಗಳೂರು ವಿವಿಯಲ್ಲಿ ನಿತೀಶ್ ಬೈಂದೂರು ಅವರ ಛಾಯಾಚಿತ್ರ ಪ್ರದರ್ಶನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬೈಂದೂರು ಪಡುವರಿಯ ಭರವಸೆಯ ಹವ್ಯಾಸಿ ಯುವ ಛಾಯಾಗ್ರಾಹಕ ನಿತೀಶ್ ಪಿ. ಬೈಂದೂರು ಅವರ ಛಾಯಾಚಿತ್ರ ಪ್ರದರ್ಶನ ಎ.21, 22 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಲ್ಲಿ ಜರುಗಲಿದೆ.

Click Here

Call us

Call us

ಮಂಗಳೂರು ವಿವಿ ಕುಲಾಧಿಪತಿ ಟಿ.ಡಿ.ಕೆಂಪರಾಜು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ನಿತೀಶ್ ಅವರ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಅವರ ಕ್ಲಿಕ್ಕಿಸಿದ ಈವರೆಗೆನ ಅತ್ಯುತ್ತಮ ಛಾಯಾಚಿತ್ರಗಳು ಪ್ರದರ್ಶನ ಕಾಣಲಿದೆ.

Click here

Click Here

Call us

Visit Now

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಿತೀಶ್ ಅವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವಾಲೇ ‘ದಿ ಹಿಂದೂ’, ‘ಕರ್ನಾಟಕ ಪೋಟೋ ನ್ಯೂಸ್’ ಮುಂತಾದ ಪ್ರತಿಷ್ಠಿತ ಪತ್ರಿಕಾ ಸಂಸ್ಥೆಗಳಲ್ಲಿ ಟ್ರೇನಿ ಛಾಯಾಗ್ರಾಹಕರಾಗಿ ದುಡಿದ ಹೆಗ್ಗಳಿಕೆ ಅವರದ್ದು. ವಿವಿಧ ಪತ್ರಿಕೆಗಳಲ್ಲಿ ನಿರಂತರವಾಗಿ ನಿತೀಶ್ ಅವರ ಛಾಯಾಚಿತ್ರಗಳು ಆಗಾಗ್ಗೇ ಪ್ರಕಟಗೊಳ್ಳುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.

ಈವರೆಗೆ ನಿತೀಶ್ ಅವರು ಛಾಯಾಚಿತ್ರ ಸ್ವರ್ಧೆಯಲ್ಲಿ ರಾಷ್ಟ್ರ, ರಾಜ್ಯ ಸ್ಭೆರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅವರ ಪ್ರತಿಭೆಯನ್ನು ಗುರುತಿಸಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಪ್ರತಿಭಾ ರತ್ನ’ ಬಿರುದು ನೀಡಿ ಗೌರವಿಸಲಾಗಿದೆ. ನಿತೀಶ್ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಮಿಸ್ ಮಾಡದೇ ನೋಡಿ ಬನ್ನಿ.

Nitish-Photography10 Nitish-Photography8 Nitish-Photography6 Nitish-Photography3 Nitish-Photography2 Nitish-Photography1

Call us

Leave a Reply

Your email address will not be published. Required fields are marked *

5 − 2 =