ಏಳವೆಯಲ್ಲಿಯೇ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ: ಈಶವಿಠಲ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿ ಮನೆಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಪುರಾಣದ ಬಗ್ಗೆ ತಿಳಿವಳಿಕೆ ಮೂಡಿಸಬೇಕಲ್ಲದೇ, ಧಾರ್ಮಿಕ ಆರಾಧನ ಕೇಂದ್ರಗಳಲ್ಲೂ ಭಗವದ್ಗೀತೆ, ರಾಮಾಯಣ, ಮಹಾಭಾರತದ ಬಗ್ಗೆ ಅರಿವು ಮೂಡಿಸುವುದು ಅಗರ‍್ಯವಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲ ಸ್ವಾಮೀಜಿ ಹೇಳಿದರು.

ಮಕರ ಸಂಕ್ರಮಣದಂದು ನಾಗೂರು ಶ್ರೀ ವೀರ ಹನುಮಾನ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಶಬರಿಮಲೆ ಸಂರಕ್ಷಣಾ ಸಮಿತಿ ಮತ್ತು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಹಯೋಗದಲ್ಲಿ ಶ್ರೀ ಅಯ್ಯಪ್ಪ ಸ್ವಾಮೀ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಸಂಸ್ಕೃತಿಯ ಕೇಂದ್ರ ಬಿಂದುವಾದ ತಾಯಿ, ತಮ್ಮ ಮಕ್ಕಳಿಗೆ ಏಳವೆಯಲ್ಲಿಯೇ ನೈತಿಕ ಶಿಕ್ಷಣ ನೀಡಬೇಕಾಗಿದ್ದು, ನಮ್ಮ ವೃತಗಳು ನೈತಿಕ ಬೆಳವಣೆಗೆಗೆ ಹಾಗೂ ಆತ್ಮಶಕ್ತಿಯನ್ನು ಜಾಗೃತರನ್ನಾಗಿ ಮಾಡುತ್ತದೆ ಎಂದರು.

ಶಬರಿಮಲೆ ಸಂರಕ್ಷಣ ಸಮಿತಿಯ ಅಧ್ಯಕ್ಷ ಸಾಬು ಮಾಧವನ್ ಮಾತನಾಡಿ, ಇಂದು ಶಬರಿಮಲೆ ಯಾತ್ರೆ ನೈಜ ಸ್ವರೂಪ ಹೊರಟುಹೋಗಿ, ಆಡಂಬರ ಆಗಿದೆ. ಈ ಯಾತ್ರೆಯಿಂದ ಪುಣ್ಯ ಲಭಿಸಬೇಕಾದರೆ ಅಲ್ಲಿನ ಧಾರ್ಮಿಕ ವಿಧಿವಿಧಾನದ ಬಗ್ಗೆ ಒಂದಿಷ್ಟು ಅರಿತು ಮುನ್ನಡೆಯುವುದು ಉತ್ತಮ ಎಂದರು.

ಶ್ರೀ ಕ್ಷೇತ್ರ ನಾಗೂರಿನ ಆಡಳಿತ ಧರ್ಮದರ್ಶಿ ಗಿರಿ ಎಸ್. ಅಧ್ಯಕ್ಷತೆ ವಹಿಸಿದ್ದರು, ಶಬರಿಮಲೆ ಸಂರಕ್ಷಣ ಸಮಿತಿಯ ಟ್ರಸ್ಟಿ ನವೀನಚಂದ್ರ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಲಲಿತಾ ಖಾರ್ವಿ, ಬೆಂಗಳೂರು ಉದ್ಯಮಿ ಶಂಕರ ರಾವ್, ಬೈಂದೂರು ತಾಲೂಕು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಅಧ್ಯಕ್ಷ ಶ್ರೀಧರ ಸ್ವಾಮಿ ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಬೈಂದೂರು ತಾಲೂಕಿನಿಂದ ಶಬರಿಮಲೈಗೆ ಪಾದಯಾತ್ರೆ ಮಾಡಿದ ಸ್ವಾಮಿಗಳನ್ನು ಅಭಿನಂದಿಸಲಾಯಿತು. ಪ್ರಸನ್ನಕುಮಾರ ಸ್ವಾಗತಿಸಿದರು, ನಾಗೇಶ ಶೇಟ್ ನಿರೂಪಿಸಿ, ಪ್ರವೀಣ ವಂದಿಸಿದರು.

 

Leave a Reply

Your email address will not be published. Required fields are marked *

two × four =