ಏಷ್ಯನ್ ಪ್ಯಾರ್ ಗೇಮ್ಸ್‌: ಕಿಶನ್ ಗಂಗೊಳ್ಳಿಗೆ ಚೆಸ್‌ನಲ್ಲಿ ಚಿನ್ನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಕಾರ್ತ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರ್ ಗೇಮ್ಸ್‌ನಲ್ಲಿ ಕುಂದಾಪುರ ಗಂಗೊಳ್ಳಿಯ ಚೆಸ್ ತಾರೆ ಕಿಶನ್ ಗಂಗೊಳ್ಳಿ ಅವರು ಪುರುಷರ ವಿಭಾಗದ ಚೆಸ್ ಬಿ೨/ಬಿ೩ ವೈಯಕ್ತಿಕ ರ‍್ಯಾಪಿಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

Click Here

Call us

Call us

Visit Now

ಮೂಲತಃ ಗಂಗೊಳ್ಳಿಯವರಾದ, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಗೀತಾ ಗಂಗೊಳ್ಳಿ ಅವರ ಪುತ್ರರಾದ ಕಿಶನ್ ಗಂಗೊಳ್ಳಿ ತಮ್ಮ ಅಂಧತ್ವವನ್ನು ಮೆಟ್ಟಿ ನಿಂತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ್ದಾರೆ.

Click here

Click Here

Call us

Call us

2012ರಲ್ಲಿ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಕಿಶನ್ ಅವರು ೨೦೧೩ರಿಂದ ೨೦೧೭ರ ತನಕ ಸತತ ನಾಲ್ಕು ಬಾರಿ ಅಂಧರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದರು. ಈಗ ಮತ್ತೊಂದು ಸಾಧನೆ ಮುಡಿಗೇರಿದೆ.

Leave a Reply

Your email address will not be published. Required fields are marked *

12 + 3 =