ಐವರು ಸಾಧಕರಿಗೆ ಎಸ್‌ಕೆಎಫ್‌ ಪ್ರಶಸ್ತಿ ಪ್ರದಾನ

Call us

Call us

ಮೂಡಬಿದಿರೆ: ಕಳೆದ 25 ವರ್ಷಧಿಗಳಿಂದ ಆಹಾರ ಧಾನ್ಯ ಸಂಸ್ಕರಣ ಕ್ಷೇತ್ರ ಅಂತಾರಾಷ್ಟ್ರೀಯಧಿವಾಗಿ ಪ್ರಸಿದ್ಧವಾಗಿರುವ ಜತೆಗೆ ನೀರಿನ ಶುದ್ಧೀಕರಣ ಯಂತ್ರಗಳ ತಯಾರಿ ಮತ್ತು ಸೇವೆಯಲ್ಲಿ ಗಣ್ಯಸ್ಥಾನ ಗಳಿಸಿರುವ ಮೂಡಬಿದಿರೆಯ ಎಸ್‌ಕೆಎಫ್‌ ಸಮೂಹ ಸಂಸ್ಥೆಯ ವತಿಯಿಂದ ಐವರು ಸಾಧಕರಿಗೆ 7ನೇ ವರ್ಷದ “ಎಸ್‌ಕೆಎಫ್‌ ಪ್ರಶಸ್ತಿ – 2014′ ನೀಡಿ ಗೌರವಿಸುವ ಸಮಾರಂಭ ಎ. 19ರಂದು ಸಂಜೆ 4 ಗಂಟೆಗೆ ಮೂಡಬಿದಿರೆ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್‌ ತಿಳಿಸಿದ್ದಾರೆ.

Call us

Call us

Call us

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ (ಶಿಕ್ಷಣ ಮತ್ತು ಸಾಹಿತ್ಯ), ಕಲಾ ಕ್ಷೇತ್ರದಲ್ಲಿ ಹೊಸಪೇಟೆಯ ಶಿಲ್ಪಿ ಕೆ. ಸುರೇಶ ಆಚಾರ್‌ (ಕಲೆ), ಕೃಷ್ಣ ಚನ್ನರಾಯಪಟ್ಣ (ಸಮಾಜ ಸೇವೆ), ಚೆನ್ನೈಯ ಡಾ| ಡಿ. ಮುರುಗಸೆಲ್ವಂ ಡಿ. ಹಾನ್‌ (ನಿರ್ಮಾಣ, ಸಮಾಜ ಸೇವೆ) ಹಾಗೂ ಪ. ಬಂಗಾಲದ ಎಸ್‌.ಕೆ. ರಾಬ್ಯೂಲ್‌ ಹಾಕ್ಯೂ (ಅಕ್ಕಿ ಉದ್ಯಮ) ಅವರನ್ನು 25,000 ರೂ. ನಗದು, ಸ್ಮರಣಿಕೆ ಸ್ವರೂಪದ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಸಮಿತಿಯ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಸಂಸದರಾದ ಡಾ| ಎಂ. ವೀರಪ್ಪ ಮೊಲಿ, ನಳಿನ್‌ ಕುಮಾರ್‌ ಕಟೀಲು, ಸಚಿವ ಕೆ. ಅಭಯಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಡಾ| ಜಯಪ್ರಕಾಶ ಮಾವಿನಕುಳಿ, ಬೈಕಾಡಿ ಜನಾರ್ದನ ಆಚಾರ್‌, ಎಸ್‌ಕೆಎಫ್‌ ಐಟಿಸಿ ಪ್ರಾಚಾರ್ಯ ಪ್ರದೀಪ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 + nineteen =