ಐ.ಎಸ್.ಟಿ.ಡಿ. ಮಂಗಳೂರು-ಉಡುಪಿ ಶಾಖೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ:ದೇಶದ ಅತಿ ದೊಡ್ಡ ತರಬೇತಿ ಸೊಸೈಟಿ ಎಂಬ ಹೆಗ್ಗಳಿಕೆಯಿರುವ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್ನ 53 ನೇ ಶಾಖೆಯು (ಮಂಗಳೂರು-ಉಡುಪಿ) ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು .

Call us

Call us

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಐಎಸ್ಟಿಡಿ ಬೆಂಗಳೂರು ಶಾಖೆಯ ಅಧ್ಯಕ್ಷೆ ಡಾ.ಮೀರಾ ವೆಂಕಟ್ ಭಾಗವಹಿಸಿ, ಆಳ್ವಾಸ್ನಲ್ಲಿ ಐಎಸ್ಟಿಡಿ ಶಾಖೆ ಪ್ರಾರಂಭವಾಗುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ.ಸಿ ಸುಜಿತ್ ಮಾತನಾಡಿ , ವಿದ್ಯಾರ್ಥಿಗಳು ಮಾನವ ಸಂಬಂಧಗಳನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸಬೇಕೆಂದರು.ಐಎಸ್ಟಿಡಿ ಸಲಹೆಗಾರ ವರಹಸ್ವಾಮಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಶುಭ ಹಾರೈಸಿದರು.

Call us

Call us

ಮಂಗಳೂರು – ಉಡುಪಿ ಶಾಖೆಯ ಅಧ್ಯಕ್ಷ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಡೀನ್ ಪೆÇ್ರ. ಪಿ ರಾಮಕೃಷ್ಣ ಚಡಗ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುದತ್ತ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ಧರ್ಮಾನಂದ್ ವಂದಿಸಿದರು.

 

Leave a Reply

Your email address will not be published. Required fields are marked *

19 + seventeen =