ಒಂದೇ ವಾರ್ಡಿನ ಮೂವರು ಜಿಪಂ ಸದಸ್ಯರು! ಇದು ತಗ್ಗರ್ಸೆ ಗ್ರಾಮದ ವಿಶೇಷ

Call us

Call us

ಬೈಂದೂರಿನ ನಾಲ್ವರಿಗೆ ಜಿಪಂ ಸ್ಥಾನ

Call us

Call us

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಒಂದೇ ಊರಿನವರು ರಾಜಕೀಯದಲ್ಲಿರುವುದು ಸಾಮಾನ್ಯ. ಗ್ರಾಪಂ, ತಾಪಂ ಸದಸ್ಯರಾಗುವುದು ಸಾಮಾನ್ಯ ಸಂಗತಿಯೇ. ಆದರೆ ಒಂದೇ ಊರಿನವರು, ಅದರಲ್ಲೂ ಒಂದೇ ವಾರ್ಡಿನವರು ಜಿಲ್ಲಾ ಪಂಚಾಯತ್ ಸದಸ್ಯರಾಗುವುದೆಂದರೆ ಸುಮ್ಮನೆಯೇ? ರಾಜ್ಯದಲ್ಲಿಯೇ ಇಂತಹದ್ದೊಂದು ವಿಶಿಷ್ಟ್ಯಕ್ಕೆ ಪಾತ್ರವಾಗಿದೆ ತಗ್ಗರ್ಸೆ ಗ್ರಾಮ. ಹೌದು ಮೂವರು ಜಿಲ್ಲಾ ಪಂಚಾಯತ್ ಸದಸ್ಯರು ಒಂದೇ ಗ್ರಾಮದವರು, ಅಷ್ಟೇಕೆ ಒಂದೇ ವಾರ್ಡಿನವರು. ಹಾಗೆ ನೋಡಿದರೇ ನೆರಮನೆಯವರು!

Call us

ಉಡುಪಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ವರ್ಧಿಸಿದ ಕೇತ್ರಗಳು ಬೇರೆ ಬೇರೆಯೇ ಆದರೂ, ಒಂದೇ ಗ್ರಾಮ ಮೂವರು ಜಿಲ್ಲಾ ಪಂಚಾಯತ್‌ಗೆ ಆಯ್ಕೆ ಆದದ್ದು ಮಾತ್ರ ವಿಶೇಷವೇ ಸರಿ. ಇನ್ನು ಶಿರೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಯ ಕಾರ್ಯಕ್ಷೇತ್ರ ಕೂಡಾ ಬೈಂದೂರು ಎನ್ನೋದು ಮತ್ತೊಂದು ವಿಶೇಷ. ಕುಂದಾಪ್ರ ಡಾಟ್ ಕಾಂ ವರದಿ

ವಂಡ್ಸೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿರುವ ಬಾಬು ಶೆಟ್ಟಿ ತಗ್ಗರ್ಸೆ, ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿರುವ ಶಂಕರ ಪೂಜಾರಿ ಯಡ್ತರೆ ಹಾಗೂ ಕೋಟೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಅಯ್ಕೆಯಾಗಿರುವ ಲಕ್ಷ್ಮೀ ಮಂಜು ಬಿಲ್ಲವ ಮೂವರು ತಗ್ಗರ್ಸೆ ಗ್ರಾಮದವರು. ಶಿರೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಸುರೇಶ್ ಬಟವಾಡಿ ಪಡವರಿ ಗ್ರಾಮದವರಾದರೂ ಅವರ ಕಾರ್ಯಕ್ಷೇತ್ರ ಬೈಂದೂರು. ಕುಂದಾಪ್ರ ಡಾಟ್ ಕಾಂ ವರದಿ

ಬಾಬು ಶೆಟ್ಟಿ ಅವರು ಕಳೆದ ಭಾರಿ ಕಂಬದಕೋಣೆ ಕ್ಷೇತ್ರದಿಂದ ಆಯ್ಕೆಯಾಗಿ ಜಿಪಂ ಸದಸ್ಯರಾಗಿದ್ದರೇ, ಈ ಭಾರಿ ವಂಡ್ಸೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಶಂಕರ ಪೂಜಾರಿ ಒಮ್ಮೆ ಕುಂದಾಪುರ ತಾಪಂ. ಸದಸ್ಯರಾಗಿದ್ದರು. 2010ರಲ್ಲಿ ನಡೆದ ತಾಪಂ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಈ ಭಾರಿ ಜಿಪಂಗೆ ಸ್ವರ್ಧಿಸಿ ಆಯ್ಕೆಯಾಗಿದ್ದಾರೆ. ಲಕ್ಷ್ಮೀ ಮಂಜು ಬಿಲ್ಲವ ಪ್ರಥಮ ಭಾರಿಗೆ ಜಿಪಂ ಪ್ರವೇಶಿಸುತ್ತಿದ್ದಾರೆ. ಇವರ ಪತಿ ಮಂಜು ಬಿಲ್ಲವ ಕಳೆದ ಭಾರಿ ಕುಂದಾಪುರ ತಾಪಂ ಸದಸ್ಯರಾಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ  ಸುರೇಶ್ ಬಟವಾಡಿ ಅವರು ಪಡುವರಿ ಗ್ರಾಪಂ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಪ್ರಸ್ತುತ ಸದಸ್ಯರಾಗಿದ್ದರು. ಪಕ್ಷದ ನಿರ್ಣಯಕ್ಕೆ ಕಟ್ಟುಬಿದ್ದು ಸ್ವರ್ಧಿಸಿ ಮೊದಲ ಪ್ರಯತ್ನದಲ್ಲಿಯೇ ಯಶ ಕಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

ಒಟ್ಟಿನಲ್ಲಿ ಬೇರೆ ಬೇರೆ ಕ್ಷೇತ್ರದಿಂದ ಸ್ವರ್ಧಿಸಿದ್ದರೂ ಎಲ್ಲರೂ ಒಂದೇ ಊರಿನವರು ಎಂಬುದು ವಿಶೇಷ. ನಾಲ್ವರು ಜಿಪಂ ಸದಸ್ಯರನ್ನು ಹೊಂದಿರುವ ಬೈಂದೂರು ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂಬುದು ನಮ್ಮ ಹಾರೈಕೆ. ಕುಂದಾಪ್ರ ಡಾಟ್ ಕಾಂ ವರದಿ

Leave a Reply

Your email address will not be published. Required fields are marked *

4 × five =