ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಸಹಯೋಗದೊಂದಿಗೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳು ಅಭಿನಯಿಸಿದ ಧಾಂ ಧೂಂ ಸುಂಟರಗಾಳಿ ನಾಟಕ ಯುವ ಮೆರಿಡಿಯನ್ ಒಪೆರಾ ಪಾರ್ಕ್ನಲ್ಲಿ ಪ್ರದರ್ಶನಗೊಂಡಿತು.
ಶೇಕ್ಸ್ಫಿಯರ್ನ್ ಟಿಂಪೆಸ್ಟ್ ಆಧಾರಿತ ನಾಟಕ ಧಾಂ ಧೂಂ ಸುಂಟರಗಾಳಿ ನಾಟಕವನ್ನು ಖ್ಯಾತ ಲೇಖಕಿ ವೈದೇಹಿ ರಚಿಸಿದ್ದು, ಕ್ರಿಯಾಶೀಲ ನಿರ್ದೇಶಕ ಜೀವನ್ರಾಂ ಸುಳ್ಯ ರಂಗದ ಮೇಲೆ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳ ನಟನೆ, ರಂಗವಿನ್ಯಾಸ, ಬೆಳಕಿನ ಸಂಯೋಜನೆ, ಸಂಗೀತ, ವಸ್ತ್ರ ವಿನ್ಯಾಸ, ರಂಗತಂತ್ರ, ಜಾದೂ ಸಂಯೋಜನೆ, ಪ್ರಸಾದನ ಎಲ್ಲಾ ವಿಭಾಗಗಳಲ್ಲಿಯೂ ನಾಟಕ ಉತ್ತಮವಾಗಿ ಮೂಡಿಬಂದಿದ್ದು, ಮಕ್ಕಳಿಗೆ ವಿಶೇಷ ಮನೋರಂಜನೆ ನೀಡಿತು.