ಒಳ್ಳೆಯ ಕಾರ್ಯಗಳಿಂದ ಭಗವಂತನ ಕೃಪೆ: ಗುರುಪ್ರಸಾದ ಭಟ್

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆಧ್ಯಾತ್ಮಿಕತೆಯಿಂದ ಜೀವನದಲ್ಲಿ ಮಾನಸಿಕ ನೆಮ್ಮದಿ, ಭಗವಂತನ ಅನುಗ್ರಹ ದೊರೆತು ಜೀವನ ಪಾವನವಾಗುತ್ತದೆ. ಭಕ್ತಿ, ಶ್ರದ್ಧೆಯಿಂದ ಧಾರ್ಮಿಕ ಆಚರಣೆಗಳನ್ನು ಆಚರಿಸಿದರೆ ದೇವರು ನಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಗುರುಪ್ರಸಾದ ಭಟ್ ಕೊರಾಡಿ ಹೇಳಿದರು.

Click Here

Call us

Call us

Visit Now

ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದೂರು ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪಡುವರಿ ಎ ಮತ್ತು ಬಿ ಒಕ್ಕೂಟ ಇದರ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದೇವರ ಅನುಗ್ರಹ ಮತ್ತು ಪ್ರಾಮಾಣಿಕ ಪ್ರಯತ್ನ ಎರಡೂ ಇರಬೇಕು. ಪರಮಾತ್ಮನ ಕೃಪಾಶೀರ್ವಾದ ದೊರೆಯಬೇಕಾದರೆ ದೇವರ ಉಪಾಸನೆ, ಕರ್ತವ್ಯ ಹಾಗೂ ಧರ್ಮವನ್ನು ಸದಾ ಮಾಡುತ್ತಿರಬೇಕು. ನಾವು ಮಾಡುವ ಒಳ್ಳೆಯ ಕಾರ್ಯಗಳು ಭಗವಂತನಿಗೆ ಸದಾ ಪ್ರೀತಿದಾಯಕವಾಗಿರುತ್ತದೆ. ಧರ್ಮದ ದಾರಿಯಲ್ಲಿ ಬದುಕಿದಾಗ ಸ್ವರ್ಗ ಪ್ರಾಪ್ತಿಯಾಗುತ್ತದೆ. ದೇವರ ಬಗೆಗಿನ ಶಕ್ತಿ ಆಂತರಿಕ ಶಾಂತಿ ನೀಡುತ್ತದೆ ಎಂದರು.

Click here

Click Here

Call us

Call us

ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭ ದೇವಳದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡರವರನ್ನು ಸಮ್ಮಾನಿಸಲಾಯಿತು. ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ, ಬಂದೂರು, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ವೆಂಕಟ ಪೂಜಾರಿ, ವಲಯಾಧ್ಯಕ್ಷ ಕೃಷ್ಣ ಪೂಜಾರಿ, ಬಂದೂರು ವಲಯ ಮೇಲ್ವಿಚಾರಕ ಕೆ.ಪಿ ಪ್ರಕಾಶ್ ಕುಮಾರ್, ಪಡುವರಿ ಬಿ ಒಕ್ಕೂಟದ ಅಧ್ಯಕ್ಷೆ ರೇಣುಕಾ, ಪಡುವರಿ ಎ ಒಕ್ಕೂಟದ ಅಧಕ್ಷೆ ನೇತ್ರಾವತಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಮಂಜುನಾಥ ಸ್ವಾಗತಿಸಿದರು. ಪಡುವರಿ ಬಿ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಜಾತ ನಿರೂಪಿಸಿದರು. ಸೇವಾ ಪ್ರತಿನಿಧಿ ಲಕ್ಷ್ಮಿ ವಂದಿಸಿದರು.

Leave a Reply

Your email address will not be published. Required fields are marked *

one × one =