ಕಂಡ್ಲೂರು: ನೂತನ ಧರ್ಮ ಕೇಂದ್ರಕ್ಕೆ ಪ್ರಥಮ ಧರ್ಮಗುರುಗಳ ಆಗಮನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಲಯಕ್ಕೆ ಸಂಬಂಧಿಸಿದ ಸಂತ ಅಂತೋನಿಗೆ ಸಮರ್ಪಿಸಲ್ಪಟ್ಟ, ಕಂಡ್ಲೂರಿನ ನೂತನ ಧರ್ಮಕೇಂದ್ರಕ್ಕೆ ಅದಿಕೃತ ನೂತನ ಧರ್ಮಗುರುಗಳಾಗಿ ವ|ವಿಕ್ಟರ್ ಡಿಸೋಜಾ ಇವರ ಆಗಮನವಾಗಿದೆ. ಈ ಮೊದಲು ಬಸ್ರೂರು ಧರ್ಮಕೇಂದ್ರದ ಅಧಿನದಲ್ಲಿದ್ದ ಈ ಧರ್ಮಕೇಂದ್ರದ ಧರ್ಮಗುರುಗಳಾದ ವ|ವಿಶಾಲ್ ಲೋಬೊ ಮತ್ತು ಕುಂದಾಪುರ ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ಮತ್ತು ಭಕ್ತರು ನೂತನ ಧರ್ಮಗುರುಗಳನ್ನು ಬರಮಾಡಿಕೊಂಡರು.

Call us

Call us

Click Here

Visit Now

ಧರ್ಮಗುರುಗಳಾದ ವಿಶಾಲ್ ಲೋಬೊ ಹಾಗೂ ಅನಿಲ್ ಡಿಸೋಜಾ ಅವರು ಧರ್ಮಗುರು ವಿಕ್ಟರ್ ಡಿಸೋಜಾ ಇವರಿಗೆ ವಿದ್ಯುಕ್ತವಾಗಿ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯ ಮತ್ತು ಪೂಜಾ ವಿಧಿ ವಿಧಾನಗಳನ್ನು ನೆಡೆಸಿಕೊಟ್ಟರು. ಮಕಮಾರ್ ಧರ್ಮಕೇಂದ್ರದಿಂದ ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕಾರ ಮಾಡಿದ ಧರ್ಮಗುರು ವಿಕ್ಟರ್ ಡಿಸೋಜಾ ’ನಾನು ಇಲ್ಲಿ ಏಸುವಿನ ಸೇವಕನಾಗಿ, ನಿಸ್ವಾರ್ಥ ಸೇವೆ ಮಾಡಲು ಬಂದಿದ್ದೆನೆ ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ, ಉಡುಪಿಯ ಧರ್ಮ ಪ್ರಾಂತ್ಯದ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರಿಗೆ ವಂದನೆಗಳನ್ನು ಅರ್ಪಿಸುತ್ತೆನೆ ಎಂದು ಅವರು ತಿಳಿಸಿದರು.

Click here

Click Here

Call us

Call us

ಸಮಾರಂಭದಲ್ಲಿ ಬಸ್ರೂರು ಧರ್ಮಕೇಂದ್ರದ ಪಾಲನ ಮಂಡಳಿ ಉಪಾಧ್ಯಕ್ಷರು, ಸದಸ್ಯರು, ಸ್ಥಳಿಯರಾದ ವಿನೋದ್ ಡಿಸೋಜಾ, ಆಲ್ವಿನ್ ಡಿಸೋಜಾ, ಮುಂತಾದ ಮುಖಂಡರು ಮತ್ತು ಭಕ್ತಾಧಿಗಳು ಹಾಜರಿದ್ದರು. ಲವೀನಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Kandlur new church (2)

Leave a Reply

Your email address will not be published. Required fields are marked *

9 − five =