ಕಂಬದಕೋಣೆ ಕಾಲೇಜು ನೂತನ ಕಟ್ಟಡ ಗುದ್ದಲಿ ಪೂಜೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜು ಇದರ ನೂತನ ಕಟ್ಟಡ ರಚನೆಗೆ ರೂ.೪೪ಲಕ್ಷದ ಕಾಮಗಾರಿಗೆ ರಾಜ್ಯ ಸಾರಿಗೆ ನಿಗಮ ಅಧ್ಯಕ್ಷರು, ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆಯನ್ನು ಗುರುವಾರ ನೇರವೇರಿಸಿದರು.

Call us

Call us

ಈ ಸಂದರ್ಭ ಮಾತನಾಡಿದ ಅವರು ಕಂಬದಕೋಣೆ ಕಾಲೇಜಿನ ಶಿಕ್ಷಕರ ಪರಿಶ್ರಮದಿಂದಾಗಿ ಮಾದರಿಯಾಗಿ ಗುರುತಿಸಿಕೊಂಡಿದೆ. ಶಿಕ್ಷಕರ ಕಾರ‍್ಯವನ್ನು ಅಭಿನಂದಿಸುವುದಾಗಿ ತಿಳಿಸಿದರು. ಮಕ್ಕಳ ವಿದ್ಯಾಭಾಸದ ಕುರಿತು ಕಾಳಜಿವಹಿಸುವ ಸಲುವಾಗಿ ಮುಂದಿನ ದಿನಗಳಲಿ ಪ್ರತಿ ಶಾಲೆಗೆ ತೆರಳಿ ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಹೆತ್ತವರೊಂದಿಗೆ ಸಮಾಲೋಚಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

Call us

Call us

ಶಾಲಾ ಮೈದಾನಕ್ಕೆ ಸುಮಾರು ೬ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಇಂಟರ್‌ಲಾಕ ವ್ಯವಸ್ಥೆಯನ್ನು ಶಾಸಕರು ಈ ಸಂದರ್ಭ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾ ಪಂ.ಸದಸ್ಯೆ ಗೌರಿ ದೇವಾಡಿಗ, ತಾ.ಪಂ.ಸದಸ್ಯ ಜಗದೀಶ ದೇವಾಡಿಗ, ಕಂಬದಕೋಣೆ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ ದೇವಾಡಿಗ, ಕೆರ್ಗಾಲು ಗ್ರಾ.ಪಂ. ಅಧ್ಯಕ್ಷೆ ಸೋಮು, ಉಪಾಧ್ಯಕ್ಷ ಸುಂದರ ಕೊಠಾರಿ, ಕಾಲೇಜು ಪ್ರಾಂಶುಪಾಲ ಜಯಲಕ್ಷ್ಮೀ ಕಾರಂತ್, ಉಪಪ್ರಾಂಶುಪಾಲ ಉಮೇಶ ರಾಯ್ಕರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ‍್ಯಕ್ರಮವನ್ನು ನಿರ್ವವಹಿಸಿದರು.

Leave a Reply

Your email address will not be published. Required fields are marked *

3 × 2 =