ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲದ ವತಿಯಿಂದ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೆಸರುಗದ್ದೆಯ ಕ್ರೀಡಾಕೂಟ ಹಾಗೂ ನಾಟಿ ಕಾಯ೯ ಕಟ್ಕೆರೆಯ ಹಡಿಲು ಬಿದ್ದ ಬಯಲಿನಲ್ಲಿ ನಡೆಸಲಾಯಿತು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರುಣಾಕರ ಶೆಟ್ಟಿಯವರು ಮಾತನಾಡಿ ಕೃಷಿಯನ್ನು ಕಡೆಗಣಿಸುತ್ತಿರುವ ಇಂದಿನ ಕಾಲದಲ್ಲಿ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲದ ಸದಸ್ಯರು ಹಡಿಲು ಬಿದ್ದಿರುವ ಗದ್ದೆಯಲ್ಲಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಕಾಯ೯ವಾಗಿದೆ ಎಂದರು. ಯುವಕ ಮಂಡಲದವರು ಪ್ರತಿ ವಷ೯ ಕಟ್ಕೆರೆಯ ಉತ್ತಮ ಕೃಷಿಕರನ್ನು ಗುರುತಿಸಿ ನಮ್ಮೂರ ಅನ್ನದಾತ ಎನ್ನುವ ಪ್ರಶಸ್ತಿಯನ್ನು ನೀಡಿ ಗುರುತಿಸಿ ಗೌರವಿಸುವ ಮೂಲಕ ಕೃಷಿಯನ್ನು ಪ್ರೊತ್ಸಾಯಿಸುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಥಮ ದಜೆ೯ ಗುತ್ತಿಗೆದಾರರಾದ ಸುಭೋಧ ಹೆಗ್ಡೆ ಕಟ್ಟೆರೆ, ಅರಣ್ಯ ಗುತ್ತಿಗೆದಾರರಾದ ಜಯಪ್ರಕಾಶ ಹೆಗ್ಡೆ ಕಟ್ಕೆರೆ, ಶಿಕ್ಷಕರಾದ ಅಜ್ಜರಗುಡ್ಡೆಮನೆ ಕರುಣಾಕರ ಶೆಟ್ಟಿ ಕಟ್ಕೆರೆ , ಕಿಶೋರಚಂದ್ರ ಶೆಟ್ಟಿ ಕಟ್ಕೆರೆ, ಲಕ್ಷಣ ಶೆಟ್ಟಿ ಕಟ್ಕೆರೆ ಇದ್ದರು.
ನೆಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಗಣೇಶ ಶೆಟ್ಟಿ ಕಟ್ಕೆರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಯ೯ದಶಿ೯ ಸಂತೋಷ ಪೂಜಾರಿ ವಂದಿಸಿದರು. ಗುಣಕರ ಶೆಟ್ಟಿ ಕಟ್ಕೆರೆ ನಿರೂಪಣೆ ಮಾಡಿದರು. ಸ್ಥಳೀಯ ಕೃಷಿಕರಾದ ನಾರಾಯಣ ಶೆಟ್ಟಿ ಕಟ್ಕೆರೆ, ಶಿವರಾಮ ಶೆಟ್ಟಿ ಕಟ್ಕೆರೆ, ಕಾಳಾವರದ ಕಲಾರಂಗ ವೇದಿಕೆ ಅಧ್ಯಕ್ಷ ರಾಘವೇಂದ್ರ ಗರಗದ್ದೆ ಉಪಸ್ಥಿತರಿದ್ದರು.